16 ವರ್ಷದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು!
23/03/2021
ಪುತ್ತೂರು: ಆರೋಗ್ಯವಾಗಿದ್ದ ಪಿಯುಸಿ ವಿದ್ಯಾರ್ಥಿನಿಯೋರ್ವಳು ಮಂಗಳವಾರ ಮುಂಜಾನೆ ಏಕಾಏಕಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯಲ್ಲಿ ನಡೆದಿದೆ.
ವಿವೇಕಾನಂದ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದ ಓದುತ್ತಿರುವ 16 ವರ್ಷ ವಯಸ್ಸಿನ ಶ್ರೇಯಾ ಪಕ್ಕಳ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಇಲ್ಲಿನ ಕುಂಡಾಪು ಪದ್ಮ ಪಕ್ಕಳ ಹಾಗೂ ಉಮಾವತಿ ದಂಪತಿಯ ಎರಡನೇ ಪುತ್ರಿಯಾಗಿದ್ದಾಳೆ.
ಶ್ರೇಯಾಳಿಗೆ ಇಂದು ಮುಂಜಾನೆ ಏಕಾಏಕಿ ಗಂಭೀರ ಅನಾರೋಗ್ಯ ಕಾಣಿಸಿಕೊಂಡಿದೆ. ಇದರಿಂದ ಆತಂಕಕ್ಕೀಡಾದ ಪೋಷಕರು ತಕ್ಷಣವೇ ಪುತ್ತೂರಿನ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.