ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ - Mahanayaka

ಆಂಬುಲೆನ್ಸ್ ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ambulance
30/03/2021


Provided by

ಕೊಪ್ಪಳ: ಆಂಬುಲೆನ್ಸ್ ನಲ್ಲಿಯೇ ಮಹಿಳೆಯೊಬ್ಬರು  ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಶಾಕಾಪುರ ಸಮೀಪ ನಡೆದಿದೆ.

38 ವರ್ಷವಯಸ್ಸಿನ ಪುಷ್ಪಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದವರು. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಶಾಕಾಖಾಪುರ ಗ್ರಾಮದ ಪುಷ್ಪಾ ಅವರಿಗೆ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾರೆ.

ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವಿಗೆ ಪುಷ್ಪಾ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳಿಬ್ಬರು ಆರೋಗ್ಯವಾಗಿದ್ದಾರೆ. ಅವರನ್ನು ಕುಷ್ಟಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಲಾಗಿದೆ.

ಮಗುವಿನ ತಾಯಿಗಾಗಿ ಆಕೆಯ 6 ವರ್ಷದ ಮಗನನ್ನೇ ಕೊಂದ ಪಾಪಿ!

ಇತ್ತೀಚಿನ ಸುದ್ದಿ