ಲೈಂಗಿಕ ಕಿರುಕುಳ: ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರಿಂದ ಸಾಲು ಸಾಲು ಆರೋಪ | ಹುಡುಗರನ್ನು ಬಿಡಲಿಲ್ಲ ಈ ಕಾಮುಕ
ಚೆನ್ನೈ: ಆನ್ ಲೈನ್ ನಲ್ಲಿ ವಿದ್ಯಾರ್ಥಿನಿಯರಿಗೆ ಅಸಭ್ಯ ಸಂದೇಶ ಕಳುಹಿಸುವುದು, ಆನ್ ಲೈನ್ ಕ್ಲಾಸ್ ವೇಳೆ ಅರೆ ಬೆತ್ತಲೆಯಾಗಿ ವಿದ್ಯಾರ್ಥಿನಿಯರ ಎದುರು ಬರುವುದು ಮೊದಲಾದ ರೀತಿಯಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಚೆನ್ನೈನ ಪದ್ಮ ಶೇಷಾದ್ರಿ ಬಾಲ ಭವನ ಶಾಲೆಯ ಅಕೌಂಟೆನ್ಸಿ ಮತ್ತು ಬಿಸಿನೆಸ್ ಸ್ಟಡೀಸ್ ನ ಶಿಕ್ಷಕ ರಾಜಗೋಪಾಲ್ ಗೆ ವಿದ್ಯಾರ್ಥಿಗಳು ತಕ್ಕ ಪಾಠ ಕಲಿಸಿದ್ದಾರೆ.
ಹಾಲಿ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಈತ ಸಾಮಾಜಿಕ ಜಾಲತಾಣಗಳ ಮೂಲಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರ ಆರೋಪಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕ ವಿದ್ಯಾರ್ಥಿನಿಯರಿಗೆ ಮಾಡಿರುವ ಮೆಸೆಜ್ ಗಳ ಸ್ಕ್ರೀನ್ ಶಾಟ್ ಹಂಚಿಕೊಳ್ಳುವ ಮೂಲಕ ಕಾಮುಕ ಶಿಕ್ಷಕನ ನಿಜ ಸ್ವರೂಪವನ್ನು ಬಯಲಿಗೆಳೆದಿದ್ದಾರೆ.
ಈತ ಶಿಕ್ಷಣ ಸಂಸ್ಥೆಯಲ್ಲಿ ಜಾತಿ ಬೇಧವನ್ನು ಕೂಡ ಸೃಷ್ಟಿಸಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸುತ್ತಿದ್ದಾರೆ. ವಿದ್ಯಾರ್ಥಿನಿಯರು ಆನ್ ಲೈಕ್ ಕ್ಲಾಸ್ ನಲ್ಲಿದ್ದಾರೆ ಎನ್ನುವ ಕಾರಣಕ್ಕೆ ಈತ ಆನ್ ಲೈನ್ ಕ್ಲಾಸ್ ಗೆ ಬರುವ ವೇಳೆ ತನ್ನ ಬಾತ್ ರೂಮ್ ನಿಂದ ಕೇವಲ ಒಂದು ಟವೆಲ್ ನ್ನು ಸೊಂಟಕ್ಕೆ ಕಟ್ಟಿಕೊಂಡು ಬರುತ್ತಿದ್ದ.
ವಿದ್ಯಾರ್ಥಿಗಳಿಗೆ ಪರ್ಸನಲ್ ಆಗಿ ಸಂದೇಶ ಕಳುಹಿಸಿದ್ದ ಈತ, ನೀನು ಫ್ರೀಯಾಗಿದ್ದರೆ ಸಿನಿಮಾಕ್ಕೆ ಹೋಗೋಣವೇ? ಎಂದು ಪ್ರಶ್ನಿಸುತ್ತಿದ್ದ. ಇದಕ್ಕೆ ವಿದ್ಯಾರ್ಥಿನಿಯರು ಖಾರವಾಗಿ ಪ್ರತಿಕ್ರಿಯಿಸಿದಾಗ, ನಾನು ಬೇರೆಯವರಿಗೆ ಕಳುಹಿಸಿದ ಸಂದೇಶ ತಪ್ಪಿ ಬಂದಿದೆ ಎಂದು ತಪ್ಪಿಸಿಕೊಳ್ಳುತ್ತಿದ್ದ.
ವಿದ್ಯಾರ್ಥಿನಿಯರಿಗೆ ಮೆಸೇಜ್ ಮಾಡಿ, ನಿನ್ನನ್ನು ಸಾರಿಯಲ್ಲಿ ನೋಡಲು ತುಂಬಾ ಚೆನ್ನಾಗಿರುತ್ತೀ, ನಿಮಗೆ ಕೆಂಪು ಬಣ್ಣದ ವಸ್ತ್ರಗಳು ತುಂಬಾ ಚೆನ್ನಾಗಿ ಕಾಣಿಸುತ್ತಿದೆ. ನನಗೆ ನಿನ್ನ ಸುಂದರವಾದ ಫೋಟೋವೊಂದನ್ನು ಕಳುಹಿಸಿಕೊಡು ಎಂದು ಶಿಕ್ಷಕ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್ ಗಳನ್ನು ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಇನ್ನೂ ಈತನ ವಿರುದ್ಧ ವಿದ್ಯಾರ್ಥಿನಿಯರು ಹೋರಾಟ ಆರಂಭಿಸುತ್ತಿದ್ದಂತೆಯೇ ಹಲವಾರು ವಿದ್ಯಾರ್ಥಿನಿಯರು ಈತನಿಂದಾದ ಕೆಟ್ಟ ಅನುಭವವನ್ನು ಹೇಳಿಕೊಂಡಿದ್ದಾರೆ. ಶಿಕ್ಷಕ ರಾಜಗೋಪಾಲ್, ವಿದ್ಯಾರ್ಥಿನಿಯರ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದ. ಕೆಲವೊಮ್ಮೆ ವಿದ್ಯಾರ್ಥಿನಿಯರ ದೇಹವನ್ನು ಸ್ಪರ್ಶಿಸಿ ಅನುಚಿತವಾಗಿ ವರ್ತಿಸುತ್ತಿದ್ದ. ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದ. ತಡ ರಾತ್ರಿ ವಿದ್ಯಾರ್ಥಿನಿಯರಿಗೆ ವಿಡಿಯೋ ಕರೆಗಳನ್ನು ಮಾಡಿ ಈತ ಹಿಂಸೆ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇನ್ನೂ ಈತ ತನ್ನ ಮಾಜಿ ವಿದ್ಯಾರ್ಥಿನಿಯೊಬ್ಬಳನ್ನು ತರಗತಿಯಲ್ಲಿ ಅಪ್ಪಿಕೊಳ್ಳಲು ಯತ್ನಿಸಿದ್ದ. ಇನ್ನೋರ್ವಳು ವಿದ್ಯಾರ್ಥಿನಿಯ ದೇಹದ ಭಾಗಗಳ ಬಗ್ಗೆ ಕಮೆಂಟ್ ಮಾಡಿ ಹಾಸ್ಯ ಮಾಡಿದ್ದಾನೆ ಜೊತೆಗೆ ತರಗತಿಯಲ್ಲಿ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡಿ ಹಾಸ್ಯ ಮಾಡುತ್ತಾನೆ. ವೇಶ್ಯೆ ಎಂಬ ಶಬ್ಧಗಳನ್ನು ಅತೀ ಹೆಚ್ಚು ಬಳಸುತ್ತಾನೆ. ವಿದ್ಯಾರ್ಥಿನಿಯರನ್ನು ಅವರು ನಿರೀಕ್ಷಿಸದೇ ಇರುವ ರೀತಿಯಲ್ಲಿ ಎದೆ ಮೊದಲಾದ ಭಾಗಗಳನ್ನು ಸ್ಪರ್ಶಿಸುತ್ತಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇನ್ನೂ ದುರಂತದ ವಿಚಾರ ಏನೆಂದರೆ, ಈ ಕಾಮುಕ ರಾಜಗೋಪಾಲ್ ಶಾಲೆಯ ಲೈಂಗಿಕ ಕಿರುಕುಳ ತಡೆ ಸಮಿತಿಯ ಮುಖ್ಯಸ್ಥನಂತೆ.
ಸುರುಳಿಯಾಕಾರದ ಕೂದಲಿನ ಒಬ್ಬಳು ವಿದ್ಯಾರ್ಥಿನಿಗೆ ಇದೇ ಶಿಕ್ಷಕ ತೊಂದರೆ ನೀಡುತ್ತಿದ್ದನಂತೆ. ಆಕೆಯ ತಲೆ ಕೂದಲನ್ನು ಬಲವಾಗಿ ಎಳೆದು ನೋವು ಮಾಡಿದ್ದು, ಈ ವೇಳೆ ವಿದ್ಯಾರ್ಥಿನಿ ನೋವಿನಿಂದ ಕಿರುಚಿದ್ದಕ್ಕೆ, ನೀನು ಯಾಕೆ ಅತ್ಯಾಚಾರ ಮಾಡುವ ವೇಳೆ ಕಿರುಚುವಂತೆ ಕಿರುಚುತ್ತಿದ್ದೀ ಎಂದು ಶಿಕ್ಷಕ ಪ್ರಶ್ನಿಸಿದ್ದನಂತೆ.
ಈತ ಕೇವಲ ವಿದ್ಯಾರ್ಥಿನಿಯರನ್ನು ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ಲೈಂಗಿಕ ಕಿರುಕುಳ ನೀಡಿದ್ದ. ಈ ವಿಚಾರವನ್ನು ಒಬ್ಬ ವಿದ್ಯಾರ್ಥಿ ಹಂಚಿಕೊಂಡಿದ್ದಾನೆ. ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ನ್ನು ಶಾಲೆಗೆ ತಂದಿದ್ದ ಎಂದು ಆರೋಪಿಸಿದ್ದ ಶಿಕ್ಷಕ, ಫೋನ್ ನ್ನು ಪರಿಶೀಲಿಸುವ ನೆಪದಲ್ಲಿ ವಿದ್ಯಾರ್ಥಿಯ ಖಾಸಗಿ ಭಾಗಗಳನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದ. ಇನ್ನೂ ಇದೇ ಶಾಲೆಯ ಶಿಕ್ಷಕಿಯೊಬ್ಬರು ಈತ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತಿಸುವ ಬಗ್ಗೆ ಮಾತನಾಡಿದ್ದು, ಅವರು ವಿದ್ಯಾರ್ಥಿಗಳಿಗೆ ಕಾರಣವಿಲ್ಲದೇ ನಿಂದಿಸುತ್ತಾರೆ, ಕಪಾಳ ಮೋಕ್ಷ ಮಾಡುತ್ತಾರೆ. ವಿದ್ಯಾರ್ಥಿನಿಯರ ಜೊತೆಗೆ ಚೆಲ್ಲಾಟವಾಡುವುದು ಮಾಡುತ್ತಿರುತ್ತಾರೆ. ಹುಡುಗ ಮತ್ತು ಹುಡುಗಿಯರ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಿರುತ್ತಾರೆ. ಹುಡುಗಿಯರು ವಸ್ತ್ರ ಬದಲಿಸುವ ಕೋಣೆಗೆ ಏಕಾಏಕಿ ಪ್ರವೇಶಿಸುತ್ತಾರೆ. ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಉದ್ರೇಕಿಸುವಂತೆ ಅವರು ತರಗತಿಯಲ್ಲಿ ಲೈಂಗಿಕ ಹಾಸ್ಯಗಳನ್ನು ಹೇಳುತ್ತಿದ್ದಾರೆ ಎಂದು ಎಂದು ಆರೋಪಿಸಿದ್ದಾರೆ.