ಕ್ರೈಸ್ತ ಸನ್ಯಾಸಿನಿಯರ ಮೇಲೆ ಬಜರಂಗದಳ ದಾಳಿ: ಕೇರಳಾದ್ಯಂತ ವ್ಯಾಪಕ ಆಕ್ರೋಶ
ನವದೆಹಲಿ: ದೆಹಲಿ-ಒಡಿಶಾ ರೈಲಿನಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಬಜರಂಗದಳ ದಾಳಿ ನಡೆಸಿದ ಪ್ರಕರಣ ಕೇರಳದಲ್ಲಿ ತೀವ್ರತೆ ಪಡೆದುಕೊಳ್ಳುತ್ತಿದೆ. ಇದೀಗ ಕೇರಳ ಸರ್ಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೇರಳ ಕೆಥೋಲಿಕ್ ಬಿಷಪ್ ಕೌನ್ಸಿಲ್ ಕೆ(KCBC) ಒತ್ತಾಯಿಸಿದೆ ಎಂದು ಮಲಯಾಳಂ ಅಂತರ್ಜಾಲ ಮಾಧ್ಯಮ ವರದಿ ಮಾಡಿದೆ.
ಮಾರ್ಚ್ 19ರಂದು ದೆಹಲಿ-ಒಡಿಶಾ ರೈಲಿನಲ್ಲಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು ಮತಾಂತರದ ಆರೋಪ ಹೊರಿಸಿದ್ದರು. ಈ ನಾಲ್ಕು ಸನ್ಯಾಸಿನಿಯರ ಪೈಕಿ ಇಬ್ಬರು ಒಡಿಶಾದವರು ಎಂದು ತಿಳಿದು ಬಂದಿದೆ.
ಇಬ್ಬರು ಸನ್ಯಾಸಿನಿಯರು ಪವಿತ್ರ ಬಟ್ಟೆ ಧರಿಸಿದ್ದರು. ಇನ್ನಿಬ್ಬರು ಸನ್ಯಾಸಿನಿಯರ ಸರಳ ಬಟ್ಟೆಯಲ್ಲಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ಕ್ರೈಸ್ತ ಸನ್ಯಾಸಿನಿಯರ ಮೇಲೆ ರೈಲಿನಲ್ಲಿ ಹಲ್ಲೆ ನಡೆಸಲು ಮುಂದಾಗಿದ್ದಾರೆ.
ಘಟನೆಯ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳಾ ಪೊಲೀಸರು ಇಲ್ಲದೆಯೇ ಕ್ರೈಸ್ತ ಸನ್ಯಾಸಿನಿಯರನ್ನು ವಶಕ್ಕೆ ಪಡೆದಿದ್ದರು. ಬಳಿಕ ಸನ್ಯಾಸಿನಿಯರನ್ನು ರಾತ್ರಿ 11:30ರ ವೇಳೆ ಪೊಲೀಸ್ ಠಾಣೆಯಿಂದ ಬಿಡುಗಡೆ ಮಾಡಲಾಗಿತ್ತು.
ಮತಾಂತರ ನಿಷೇಧ ಕಾಯ್ದೆಯ ಪ್ರಕಾರ ಕ್ರೈಸ್ತ ಸನ್ಯಾಸಿನಿಯರನ್ನು ಸಿಲುಕಿಸಲು ಬಜರಂಗದಳದ ಕಾರ್ಯಕರ್ತರು ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೇರಳದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಕೇರಳ ಸರ್ಕಾರ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: ರೈಲಿನಲ್ಲಿ ನಾಲ್ವರು ಕ್ರೈಸ್ತ ಸನ್ಯಾಸಿನಿಯರ ಮೇಲೆ ಬಜರಂಗದಳ ದಾಳಿ