ಉಡುಪಿ: ‘ದುರ್ಗಾ ದೌಡ್’ ಮೆರವಣಿಗೆಯಲ್ಲಿ ಹಿಂದೂ ಜಾಗರಣ ಕಾರ್ಯಕರ್ತರಿಂದ ತಲವಾರು ಪ್ರದರ್ಶನ - Mahanayaka
10:55 AM Thursday 21 - August 2025

ಉಡುಪಿ: ‘ದುರ್ಗಾ ದೌಡ್’ ಮೆರವಣಿಗೆಯಲ್ಲಿ ಹಿಂದೂ ಜಾಗರಣ ಕಾರ್ಯಕರ್ತರಿಂದ ತಲವಾರು ಪ್ರದರ್ಶನ

hindu jagarana vedike udupi
16/10/2021


Provided by

ಉಡುಪಿ: ಮಂಗಳೂರಿನಲ್ಲಿ ಬಜರಂಗದಳ ತ್ರಿಶೂಲ ದೀಕ್ಷೆ ಕಾರ್ಯಕ್ರಮ ನಡೆಸಿದ ಬೆನ್ನಲ್ಲೇ ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯು ‘ದುರ್ಗಾ ದೌಡ್’ ಕಾರ್ಯಕ್ರಮದ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ ಮಾಡಿ ಮೆರವಣಿಗೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಗರದ ಅಂಬಲಪಾಡಿಯ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದವರೆಗೆ ನಡೆದಿದ್ದು, ಈ ಮೆರವಣಿಗೆಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ಹಾಗೂ ಶಾಸಕ ರಘುಪತಿ ಭಟ್ ಸಹಿತ ಬಿಜೆಪಿ ಮುಖಂಡರು ಕೂಡ ಭಾಗವಹಿಸಿದ್ದರು.

ವಿಜಯದಶಮಿ ಹಿನ್ನೆಲೆಯಲ್ಲಿ ದುರ್ಗಾ ಡೌಡ್ ಮೆರವಣಿಗೆ ನಡೆಸಿದ್ದು, ಈ ಮೆರವಣಿಗೆಯಲ್ಲಿ ಕಾರ್ಯಕರ್ತರು ಸಾರ್ವಜನಿಕವಾಗಿಯೇ ತಲವಾರು ಪ್ರದರ್ಶಿಸಿರುವುದು ಕಂಡು ಬಂದಿದೆ.

ಇನ್ನೂ ಅಂಬಲಪಾಡಿಯಲ್ಲಿ ನಡೆದ ಸಮಾರೋಪದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್,  ದೇಶದಲ್ಲಿ ಸಮಾಜವಾದ ಸಮಾಧಿಯಾಗಿದೆ. ರಾಷ್ಟ್ರವಾದ ಜಾಗೃತಿಯಾಗಿದೆ. ಜನರು ಜಾತ್ಯತೀತತೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಬುದ್ಧಿ ಜೀವಿಗಳು ಪ್ರಗತಿಪರರ ಹೆಸರಿನಲ್ಲಿ ಕಾಲೇಜುಗಳ ಒಳಗೆ ಬದುಕುತ್ತಿದ್ದಾರೆ. ಸದ್ಯವೇ ದೇಶದಲ್ಲಿ , ರಾಜ್ಯದಲ್ಲಿ ಇವರ ಆಟೋಪಗಳು ನಿಲ್ಲುತ್ತವೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು

‘ಹಿಂದೂ ಹುಲಿಯ ಸಿಡಿ ಬಿಡುಗಡೆ’ ಪೋಸ್ಟ್ ಬಗ್ಗೆ ಮೌನ ಮುರಿದ ಯತ್ನಾಳ್

ದುರ್ಗಾ ದೇವಿಯ ವಿಗ್ರಹ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ನಾಲ್ವರು ಯುವಕರ ದಾರುಣ ಸಾವು!

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ 89 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಕಳ್ಳರು!

ದಕ್ಷಿಣ ಕನ್ನಡ, ಉಡುಪಿ ಸಹಿತ 16 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ!

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು: 20ಕ್ಕೂ ಅಧಿಕ ಮಂದಿ ನಜ್ಜುಗುಜ್ಜು

ದಸರಾ ಮೆರವಣಿಗೆಯ ಮೇಲೆ ಹರಿದ ಕಾರು: 20ಕ್ಕೂ ಅಧಿಕ ಮಂದಿ ನಜ್ಜುಗುಜ್ಜು

ಕನ್ನಡದ ಮತ್ತೋರ್ವ ಹಿರಿಯ ನಟ ಪ್ರೊ.ಜಿ.ಕೆ.ಗೋವಿಂದ ರಾವ್ ನಿಧನ

ಇತ್ತೀಚಿನ ಸುದ್ದಿ