ಬಾಲಕಿಗೆ ಹೆರಿಗೆಯಾದ ಬಳಿಕ ಬಾಲ್ಯ ವಿವಾಹ ಬಯಲಿಗೆ: ಬಾಲಕಿಯ ಪತಿ ಅರೆಸ್ಟ್ - Mahanayaka
8:22 AM Thursday 12 - December 2024

ಬಾಲಕಿಗೆ ಹೆರಿಗೆಯಾದ ಬಳಿಕ ಬಾಲ್ಯ ವಿವಾಹ ಬಯಲಿಗೆ: ಬಾಲಕಿಯ ಪತಿ ಅರೆಸ್ಟ್

arrest
12/10/2021

ತುಮಕೂರು: ಬಾಲಕಿ ಹೆರಿಗೆಯಾದ ಬಳಿಕ ಬಾಲ್ಯ ವಿವಾಹ ಪ್ರಕರಣವೊಂದು ಪತ್ತೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪತಿಯನ್ನು ಪೊಲೀಸರು ಬಂಧಿಸಿ, ಪೋಕ್ಸೋ ಕಾಯ್ದೆಯಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿಯೋರ್ವಳು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ವೇಳೆ ಬಾಲಕಿಯ ವಯಸ್ಸು ತಿಳಿದು ಬಂದಿದ್ದು, ಆಕೆ ಅಪ್ರಾಪ್ತೆ ಎನ್ನುವುದು ಸ್ಪಷ್ಟಗೊಂಡಿದೆ. ಹಾಗಾಗಿ ಅಪ್ರಾಪ್ತೆಯ ಪತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ತುಮಕೂರು ಜಿಲ್ಲೆ ಕೊರಟಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಹೆಣ್ಣು ಮಗುವಾಗಿದ್ದು, ಈ ವೇಳೆ ಬಾಲ್ಯವಿವಾಹವಾಗಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ಪತಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಮುಸ್ಲಿಮರ ಮುಂಗೈಗೆ ಬೆಲ್ಲ: ಕಾಂಗ್ರೆಸ್ ನ ನಿಜಬಣ್ಣವನ್ನು ಸಿ.ಎಂ.ಇಬ್ರಾಹಿಂ ಬೆತ್ತಲಾಗಿಸಿದ್ದಾರೆ | ಕಾಂಗ್ರೆಸ್ ಗೆ ಚುಚ್ಚಿದ ಬಿಜೆಪಿ

ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್

ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡುವುದು ಹೇಗೆ?

ಮಳೆ ನೀರಿನಲ್ಲಿ ಕೊಚ್ಚಿ ಹೋದ ಲಕ್ಷಾಂತರ ರೂಪಾಯಿಯ ಮೀನುಗಳು!

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ತಾಯಿ ಮಗುವಿಗೆ ಡಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್

ಬಿಜೆಪಿಗೆ ಬಿಗ್ ಶಾಕ್: ಬಿಜೆಪಿ ತೊರೆದು ಪುತ್ರನೊಂದಿಗೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಸಚಿವ!

ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ!

 

ಇತ್ತೀಚಿನ ಸುದ್ದಿ