ಪತ್ನಿಯ ಜನನಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ! | ಘಟನೆಯ ಹಿಂದಿದೆ ಮಹಿಳೆಯ ಕರುಣಾಜನಕ ಕಥೆ - Mahanayaka

ಪತ್ನಿಯ ಜನನಾಂಗಕ್ಕೆ ಮದ್ಯದ ಬಾಟಲಿ ನುಗ್ಗಿಸಿದ ಪತಿ! | ಘಟನೆಯ ಹಿಂದಿದೆ ಮಹಿಳೆಯ ಕರುಣಾಜನಕ ಕಥೆ

acharya
25/03/2021

ಭುವನೇಶ್ವರ್:  ಪತ್ನಿಯನ್ನು ವೇಶ್ಯಾವಾಟಿಕೆಗೆ ನೂಕಿದ ಪತಿ ಇಷ್ಟೂ ಸಾಲದು ಎಂಬಂತೆ ಪತ್ನಿಯ ಗುಪ್ತಾಂಗಕ್ಕೆ  ಮದ್ಯದ ಬಾಟಲಿಯನ್ನು ನುಗ್ಗಿಸಿ ವಿಕೃತಿ ಮೆರೆದ ಘಟನೆ  ಒಡಿಶಾ ರಾಜಧಾನಿ  ಭುವನೇಶ್ವರದಲ್ಲಿ ನಡೆದಿದೆ.

10 ವರ್ಷಗಳ ಹಿಂದೆ ಕಂಧಮಾಲ್ ಜಿಲ್ಲೆಯ ತಮುದಿಬಂಧ ಗ್ರಾಮದ ನಿವಾಸಿಯಾಗಿರುವ ಮಹಿಳೆ ಕೇಂದ್ರಪರಾ ಜಿಲ್ಲೆಯ ಮಟ್ಟಮುಂಡೈ ಗ್ರಾಮದ  ಚಂದನ್ ಆಚಾರ್ಯ   ಎಂಬಾತನನ್ನು ಮದುವೆಯಾಗಿದ್ದರು. ಮದುವೆಯ ಬಳಿಕ ಬಲವಂತವಾಗಿ ಪತ್ನಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದ.  ತನ್ನ ಮನೆಯಲ್ಲಿಯೇ ವೇಶ್ಯಾವಾಟಿಕೆ ಚಟುವಟಿಕೆಯನ್ನು ಆರೋಪಿ ಮಾಡುತ್ತಿದ್ದ.

ಪತಿಯ ಹಿಂಸೆಯನ್ನು ಕಷ್ಟಪಟ್ಟು ಸಹಿಸಿಕೊಂಡಿದ್ದ ಮಹಿಳೆ ಕಳೆದ ಐದು ದಿನಗಳ ಹಿಂದೆ ವೇಶ್ಯಾವಾಟಿಕೆ ನಡೆಸಲು ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಮದ್ಯಪಾನ ಮಾಡಿ ಬಂದು ಕಬ್ಬಿಣದ ಸಲಾಕೆಯಿಂದ ಪತ್ನಿಯನ್ನು ಹೊಡೆದುರುಳಿಸಿದ್ದು, ಬಳಿಕ ಮದ್ಯದ ಬಾಟಲಿಯನ್ನು ಪತ್ನಿಯ ಜನನಾಂಗಕ್ಕೆ ನುಗ್ಗಿಸಿದ್ದಾನೆ.

ಈ ವಿಚಾರ ತಿಳಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆ ಹಾಗೂ ಆಕೆಯ 5 ವರ್ಷದ ಹೆಣ್ಣು ಮಗಳನ್ನು ರಕ್ಷಿಸಿ, ಆರೋಪಿ ಚಂದನ್ ಆಚಾರ್ಯನನ್ನು ಬಂಧಿಸಿದ್ದಾರೆ.

ಎಲ್ಲ ಸುದ್ದಿ ಓದಿ:

ಗರ್ಭಿಣಿಯಾಗುತ್ತಿಲ್ಲ ಎಂದು ಮಾಂತ್ರಿಕನ ಬಳಿ ಹೋದ ಮಹಿಳೆ | ಮಾಂತ್ರಿಕ ಮಾಡಿದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ