ಕೆಎಸ್ಸಾರ್ಟಿಸಿಯ ಬಳಿಗೂ ಸುಳಿಯಿತು ಖಾಸಗೀಕರಣದ ವಾಸನೆ!? - Mahanayaka
7:45 AM Thursday 16 - October 2025

ಕೆಎಸ್ಸಾರ್ಟಿಸಿಯ ಬಳಿಗೂ ಸುಳಿಯಿತು ಖಾಸಗೀಕರಣದ ವಾಸನೆ!?

ksrtc
06/04/2021

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಕಳೆದ ಹಲವು ಸಮಯಗಳಿಂದ ರಾಜ್ಯ ಸರ್ಕಾರದ ವಿರುದ್ಧ ನೌಕರರು ಪ್ರತಿಭಟಿಸುತ್ತಿದ್ದಾರೆ. ನಾಳೆಯೂ ಈ ಪ್ರತಿಭಟನೆ ನಡೆಯುತ್ತಿದೆ. ಆದರೆ, ರಾಜ್ಯ ಸರ್ಕಾರ ಈ ಪ್ರತಿಭಟನೆಯನ್ನು ಇಲ್ಲಿಯವರೆಗೆ ಗಂಭೀರವಾಗಿ ಪರಿಗಣಿಸಿಯೇ ಇಲ್ಲ.


Provided by

ಸಾರಿಗೆ ನೌಕರರು ಪ್ರತಿಭಟಿಸಿದರೆ, ಖಾಸಗಿ ಬಸ್ ಗಳನ್ನು ರಸ್ತೆಗಿಳಿಸುತ್ತೇವೆ ಎಂದು ರಾಜ್ಯ ಸರ್ಕಾರ ರಾಜಾರೋಷವಾಗಿ ಹೇಳುತ್ತಿದೆ. ಮಾಹಿತಿಯ ಪ್ರಕಾರ ನಾಳೆ 3 ಸಾವಿರ ಖಾಸಗಿ ಬಸ್ ಗಳು ರಸ್ತೆಗಳಿಯಲಿವೆ ಎಂದು ಹೇಳಲಾಗಿದೆ. ಈ ನಡುವೆ ರಾಜ್ಯಾದ್ಯಂತ ಚರ್ಚೆಯೊಂದು ನಡೆಯುತ್ತಿದ್ದು, ಕೆಎಸ್ಸಾರ್ಟಿಸಿಯನ್ನೂ ಸರ್ಕಾರ ಮಾರಾಟ ಮಾಡಲು ಮುಂದಾಗಿದೆ. ಈ ಕಾರಣಕ್ಕಾಗಿ ಸಾರಿಗೆ ನೌಕರರ ಪ್ರತಿಭಟನೆಗೆ ಕ್ಯಾರೇ ಅನ್ನುತ್ತಿಲ್ಲ. ತಾವು ಕೆಎಸ್ಸಾರ್ಟಿಸಿಯನ್ನು ಖಾಸಗೀಕರಣ ಮಾಡಲು ಮುಂದಾಗಿದ್ದೇವೆ ಎನ್ನುವ ಸಂದೇಶವನ್ನು ಸರ್ಕಾರವು, ಖಾಸಗಿ ಬಸ್ ಗಳನ್ನು ರಸ್ತೆಗಿಳಿಸುವ ಮೂಲಕ ಸಾರಿಗೆ ನೌಕರರಿಗೆ ನೀಡಿದೆ ಎಂದು ಹೇಳಲಾಗಿದೆ.

ನಾಳೆ ಮತ್ತೆ ರಾಜ್ಯ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ಸರ್ಕಾರವು, ನಾವು ಮುಷ್ಕರ ನಿರತರ ಜೊತೆಗೆ ಮಾತನಾಡುವುದಿಲ್ಲ, ಕೆಲಸಕ್ಕೆ ಹಾಜರಾಗದೇ ಗೈರು ಆದ್ರೆ ವೇತನ ಇಲ್ಲ ಎಂಬ ನೀತಿ ಅನುಸಾರ ವೇತನ ಕಡಿತಕ್ಕೂ ಆದೇಶಿಸಿದೆ. ಅಲ್ಲದೇ ಎಸ್ಮಾ ಜಾರಿಯ ಎಚ್ಚರಿಕೆಯನ್ನು ಕೂಡ ನೀಡಿದೆ.

ಕರ್ನಾಟಕದ ದೊಡ್ಡ ಸಂಸ್ಥೆಯಾಗಿರುವ  ಕೆಎಸ್ಸಾರ್ಟಿಸಿಯನ್ನು ನಷ್ಟಕ್ಕೆ ತಳ್ಳಿ, ಕಾನೂನು ಪ್ರಕಾರವೇ ಖಾಸಗೀಕರಣಕ್ಕೆ ಸರ್ಕಾರ ಮುಂದಾಗುತ್ತಿದೆ. ಹೀಗಾಗಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಪ್ರಸ್ತಾಪಕ್ಕೆ ಸರ್ಕಾರ ಒಪ್ಪುತ್ತಿಲ್ಲ ಎನ್ನುವ ಅನುಮಾನಗಳು ಇದೀಗ ಸೃಷ್ಟಿಯಾಗಿದೆ. ಕೆಎಸ್ಸಾರ್ಟಿಸಿ ಬಸ್ ಗಳು ಇರುವಾಗ, ಖಾಸಗಿ ಬಸ್ ಗಳನ್ನು ಸರ್ಕಾರ ಯಾಕೆ ರಸ್ತೆಗಿಳಿಸುತ್ತಿದೆ? ಇದರ ಹಿಂದೆ ಖಾಸಗಿಕರಣದ ವಾಸನೆ ಬರುತ್ತಿದೆ ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ