ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್ - Mahanayaka

ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್

sudhakar modi
12/10/2021

ಬೆಂಗಳೂರು: ಆಧುನಿಕ ಮಹಿಳೆಯರು ವಿವಾಹವಾಗಲು, ಮಕ್ಕಳನ್ನು ಹೆರಲು ನಿರಾಕರಿಸುತ್ತಿದ್ದಾರೆ ಎಂಬ ಸಚಿವ ಸುಧಾಕರ್ ಅವರ ಹೇಳಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದ್ದು, ಮದುವೆಯಾದರೂ ‘ಸಿಂಗಲ್’ ಆಗಿರುವ ಮೋದಿಯವರ ಬಗ್ಗೆ ಹೀಗೆ ಹೇಳಲು ನಿಮಗೆ ಧೈರ್ಯ ಇದೆಯೇ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಸಚಿವ ಸುಧಾಕರ್ ಅವರಿಗೆ ಸರಣಿ ಟ್ವೀಟ್ ಮೂಲಕ ಕುಟುಕಿರುವ ಕಾಂಗ್ರೆಸ್, ಸುಧಾಕರ್ ಅವರು ಹಿಂದೊಮ್ಮೆ ‘ಯಾರೂ ಏಕಪತ್ನಿ ವ್ರತಸ್ಥರಿಲ್ಲ’ ಎಂದಿದ್ದರು, ಈಗ ‘ಮಹಿಳೆಯರು ವಿವಾಹವಾಗಲು ನಿರಾಕರಿಸುತ್ತಿದ್ದಾರೆ’ ಎಂದಿದ್ದಾರೆ. ಸುಧಾಕರ್ ಅವರೇ ತಮ್ಮ ಎರಡೂ ತರ್ಕದಲ್ಲಿ ವೈರುಧ್ಯವಿದೆ, ಕಂಡವರ ಪತ್ನಿಯರ ಲೆಕ್ಕ ಸಿಗಲಿಲ್ಲವೇ!? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇಷ್ಟಕ್ಕೂ ಸಿಡಿ ತಡೆಯಾಜ್ಞೆ ತಂದ ಸಚಿವರಿಗೆ ಮಹಿಳೆಯರ ಬದುಕಿನ ಬಗ್ಗೆ ಏಕಿಷ್ಟು ಆಸಕ್ತಿ!? ಆಧುನಿಕ ಮಹಿಳೆಯರು ವಿವಾಹವಾಗಲು, ಮಕ್ಕಳನ್ನು ಹೆರಲು ನಿರಾಕರಿಸುತ್ತಿದ್ದಾರೆ ಎಂದಿರುವ ಸುಧಾಕರ್  ಅವರೇ, ಮದುವೆಯಾದರೂ ‘ಸಿಂಗಲ್’ ಆಗಿರುವ ಮೋದಿಯವರಿಗೆ ಹೀಗೆ ಹೇಳುವ ಧೈರ್ಯವಿದೆಯೇ?! ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮಹಿಳೆಯರ ಬದುಕನ್ನ ನಿರ್ಧರಿಸುವ, ಅವರ ಆಯ್ಕೆಯನ್ನು ನಿಯಂತ್ರಿಸುವ, ಅವರ ಸ್ವತಂತ್ರ ಪ್ರಶ್ನಿಸುವ ಬಿಜೆಪಿಗೂ ತಾಲಿಬಾನ್‌ ಗೂ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಮತ್ತೆ ಬಿಜೆಪಿಗೆ ತಿರುಗೇಟು ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ತರಕಾರಿ ವ್ಯಾಪಾರಿಯ ಹನಿಟ್ರ್ಯಾಪ್: ಯುವತಿ ಸಹಿತ ಮೂವರು ಆರೋಪಿಗಳ ಅರೆಸ್ಟ್

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ತಾಯಿ ಮಗುವಿಗೆ ಡಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್

ಭಾರೀ ಮಳೆಗೆ ಕುಸಿದು ಬಿದ್ದ ಮನೆ: ಇಬ್ಬರು ಮಕ್ಕಳ ದಾರುಣ ಸಾವು

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ!

ಬೊಮ್ಮಾಯಿ ಸಂಪುಟದ 4 ಹಾಲಿ ಸಚಿವರಿಗೆ ಕೋಕ್ ನೀಡುವ ಸಾಧ್ಯತೆ | 8 ಶಾಸಕರಿಗೆ ಶೀಘ್ರವೇ ಸಚಿವ ಸ್ಥಾನ!

KSRTC ಬಸ್  ಮತ್ತು ಆಟೋ ಡಿಕ್ಕಿ: ಮದುಮಗ ಸೇರಿದಂತೆ ಮೂವರ ದಾರುಣ ಸಾವು

ಮಂಗಳೂರಿನ ಲಾಡ್ಜ್ ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ | ಬಾಲಕಿಯ ಮುಗ್ಧತೆ ದುರುಪಯೋಗಪಡಿಸಿ ಕೊಂಡು ಕೃತ್ಯ!

ಇತ್ತೀಚಿನ ಸುದ್ದಿ