ಸಿಡಿ ಪ್ರಕರಣದಲ್ಲಿ "ಮಹಾನಾಯಕ" ಪದ ಬಳಕೆಯ ವಿರುದ್ಧ ನಟ ಪ್ರಥಮ್ ಆಕ್ರೋಶ - Mahanayaka
3:24 AM Saturday 18 - October 2025

ಸಿಡಿ ಪ್ರಕರಣದಲ್ಲಿ “ಮಹಾನಾಯಕ” ಪದ ಬಳಕೆಯ ವಿರುದ್ಧ ನಟ ಪ್ರಥಮ್ ಆಕ್ರೋಶ

pratham
28/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ವಿಚಾರ ರಾಜ್ಯದಲ್ಲಿ ಗಬ್ಬೆದ್ದ ಸಂದರ್ಭದಲ್ಲಿಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ “ಮಹಾನಾಯಕ” ಎಂದು ಶಬ್ಧ ಬಳಕೆ ಮಾಡುತ್ತಿರುವುದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನಟ ಪ್ರಥಮ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Provided by

ಮಹಾನಾಯಕ ಎನ್ನುವ ಪದವನ್ನು ಸಿಡಿ ಪ್ರಕರಣದಲ್ಲಿ ಬಳಸುವುದು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಟ ಪ್ರಥಮ್ ಟ್ವೀಟ್ ಮಾಡಿದ್ದು, ಪ್ರಥಮ್ ಟ್ವೀಟ್ ಗೆ ಸಾರ್ವಜನಿಕರು ಕೂಡ ಬೆಂಬಲ ಸೂಚಿಸಿದ್ದಾರೆ.

ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಗೆ ಗೌರವದಿಂದ ಮಹಾನಾಯಕ ಅಂತಿದ್ರು! ಈಗCDಮಾಡೋರನ್ನ ಮಹಾನಾಯಕ  ಅಂತಿದ್ದಾರೆ! ಯಾವಪದ ಯಾರಿಗೆ ಬಳಸಬೇಕು ಅನ್ನೋ ಕನಿಷ್ಟಜ್ಞಾನ ಬೇಡ್ವಾ ನಿಮ್ಗೆ? ಅಂಬೇಡ್ಕರ್ ಫೋಟೋ ವಿರೂಪವಾದಾಗ ಅಗೌರವ ಆಗಲ್ಲ, ಇಂತ ಪದಗಳನ್ನ ಅಶ್ಲೀಲ CD ಕೇಸ್ ನವರಿಗೆ ಬಳಸಿದ್ರೆ ಅವಮಾನ ಮಾಡಿದಂತೆ! ಇನ್ನೊಮ್ಮೆ ಮಹಾನಾಯಕ ಅಂದ್ರೆ ಮುಖಕ್ಕೆಉಗೀರಿ! ಎಂದು ಪ್ರಥಮ್ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ