ಮಳೆ ನೀರಿನಲ್ಲಿ ಕೊಚ್ಚಿ ಹೋದ ಲಕ್ಷಾಂತರ ರೂಪಾಯಿಯ ಮೀನುಗಳು! - Mahanayaka
8:45 AM Tuesday 9 - September 2025

ಮಳೆ ನೀರಿನಲ್ಲಿ ಕೊಚ್ಚಿ ಹೋದ ಲಕ್ಷಾಂತರ ರೂಪಾಯಿಯ ಮೀನುಗಳು!

fish
12/10/2021

ದಾವಣಗೆರೆ:  ರಾಜ್ಯಾದ್ಯಂತ ವಿಪರೀತ ಮಳೆಯಾಗುತ್ತಿದ್ದು,  ಮಳೆಯ ಪರಿಣಾಮ ಮೀನು ಸಾಕಣಿಕೆಗಾರರು ತೀವ್ರ ನಷ್ಟಕ್ಕೊಳಗಾಗಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದ್ದು, ಮಳೆಯ ಪರಿಣಾಮ ಕೆರೆಗಳು  ತುಂಬಿ ಲಕ್ಷಾಂತರ ರೂಪಾಯಿ ಮೀನುಗಳು ನೀರಿನಲ್ಲಿ ಹರಿದು ಹೋಗಿವೆ.


Provided by

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ದೊಡ್ಡ ಕೆರೆ ಕೋಡಿ ಬಿದ್ದಿದ್ದು, ಪರಿಣಾಮವಾಗಿ  ಕೆರೆ ಗುತ್ತಿಗೆ ಪಡೆದು ಮೀನು ಬೆಳೆಸುತ್ತಿದ್ದವರಿಗೆ ತೀವ್ರವಾಗಿ ನಷ್ಟವಾಗಿದೆ ಎಂದು ಹೇಳಲಾಗಿದೆ. ಘಟನೆಯಿಂದ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಕಮಲ ನಾಯ್ಕ ಮತ್ತು ಪಾಲುದಾರರು ನಷ್ಟ ಅನುಭವಿಸಿದವರು ಎಂದು ತಿಳಿದು ಬಂದಿದೆ. ನಾಲ್ಕು ಲಕ್ಷ ರೂಪಾಯಿ ನೀಡಿ ಕೆರೆ ಲೀಸ್ ಪಡೆದಿದ್ದ ಇವರು, 12 ಲಕ್ಷ ರೂಪಾಯಿ ಮೌಲ್ಯದ ಮೀನುಗಳನ್ನು ಕೆರೆಗೆ ಬಿಟ್ಟಿದ್ದರು. ಕೆಲವೇ ದಿನಗಳಲ್ಲಿ ಮೀನು ಹಿಡಿದು ಮಾರಾಟ ಮಾಡಲು ಸಿದ್ಧತೆಯಲ್ಲಿರುವಾಗಲೇ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಕೆರೆ ಕೋಡಿ ಬಿದ್ದು,  ಮೀನುಗಳು ನೀರಿಲ್ಲಿ ಹರಿದು ಹೋಗಿವೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಅವಿದ್ಯಾವಂತರು ದೇಶಕ್ಕೆ ಹೊರೆ, ಅವರು ಉತ್ತಮ ನಾಗರಿಕನಾಗಲು ಹೇಗೆ ಸಾಧ್ಯ? | ಅಮಿತ್ ಶಾ

ಮುಸ್ಲಿಮರ ಮುಂಗೈಗೆ ಬೆಲ್ಲ: ಕಾಂಗ್ರೆಸ್ ನ ನಿಜಬಣ್ಣವನ್ನು ಸಿ.ಎಂ.ಇಬ್ರಾಹಿಂ ಬೆತ್ತಲಾಗಿಸಿದ್ದಾರೆ | ಕಾಂಗ್ರೆಸ್ ಗೆ ಚುಚ್ಚಿದ ಬಿಜೆಪಿ

ಮದುವೆ ಆದರೂ ‘ಸಿಂಗಲ್’ ಆಗಿರುವ ಮೋದಿ ಬಗ್ಗೆ ಮಾತನಾಡುವ ಧೈರ್ಯ ನಿಮಗಿದೆಯೇ? | ಸುಧಾಕರ್ ಗೆ ಕುಟುಕಿದ ಕಾಂಗ್ರೆಸ್

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ: ತಾಯಿ ಮಗುವಿಗೆ ಡಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಕಾವೂರಿನ ಮುಸ್ಲಿಮ್ ಸಹೋದರರಿಬ್ಬರ ಕೊಲೆ ಯತ್ನ ಪ್ರಕರಣ: ಆರೋಪಿಗಳ ಮೇಲೆ 307 ಪ್ರಕರಣ ದಾಖಲು: ಪಾಪ್ಯುಲರ್ ಫ್ರಂಟ್ ಶ್ಲಾಘನೆ

 

ಇತ್ತೀಚಿನ ಸುದ್ದಿ