ಗರ್ಭಿಣಿಯಾಗುತ್ತಿಲ್ಲ ಎಂದು ಮಾಂತ್ರಿಕನ ಬಳಿ ಹೋದ ಮಹಿಳೆ | ಮಾಂತ್ರಿಕ ಮಾಡಿದ್ದೇನು ಗೊತ್ತಾ? - Mahanayaka

ಗರ್ಭಿಣಿಯಾಗುತ್ತಿಲ್ಲ ಎಂದು ಮಾಂತ್ರಿಕನ ಬಳಿ ಹೋದ ಮಹಿಳೆ | ಮಾಂತ್ರಿಕ ಮಾಡಿದ್ದೇನು ಗೊತ್ತಾ?

pregnant
22/03/2021

ಲಕ್ನೋ: ಮನುವಾದದ ಅಕ್ರಮ ಶಿಶು ಮೂಢನಂಬಿಕೆ. ಈ ಮೂಢನಂಬಿಕೆಗೆ ಬಲಿಯಾದವರ ಸಂಖ್ಯೆ ಅಷ್ಟಿಷ್ಟಲ್ಲ. ಇದೀಗ ಮಾಂತ್ರಿಕನೋರ್ವನ ಮಾತು ಕೇಳಿ ಮಹಿಳೆಯೋರ್ವಳು ತನ್ನ ನೆರೆಯ ಮನೆಯ ಮೂರು ವರ್ಷದ ಮಗುವನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.

ಮನುವಾದ ಮತ್ತು ಮೂಢನಂಬಿಕೆಯ ಕೊಂಪೆ ಉತ್ತರಪ್ರದೇಶದ ಹಾರ್ದೋಯಿ ನಗರದಲ್ಲಿ ಈ ಘಟನೆ ನಡೆದಿದೆ. ಬಾಳಿ ಬದುಕಬೇಕಿದ್ದ 3 ವರ್ಷ ವಯಸ್ಸಿನ ಆಕಾಶ್ ನನ್ನು ಮಾಂತ್ರಿಕನ ಮಾತು ಕೇಳಿ ಮಹಿಳೆ ಹತ್ಯೆ ಮಾಡಿದ್ದಾಳೆ.

25 ವರ್ಷ ವಯಸ್ಸಿನ ಮಹಿಳೆ ಈ ಕೃತ್ಯ ಮಾಡಿದ್ದಾಳೆ. ಮದುವೆಯಾದರೂ ಈಕೆ ಗರ್ಭಿಣಿಯಾಗಿರಲಿಲ್ಲ. ಈಕೆ ಡಾಕ್ಟರ್ ಬಳಿಗೆ ಹೋಗಿದ್ದರೆ ಈಕೆಗೆ ಸರಿಯಾದ ಸಲಹೆ ಸಿಗುತ್ತಿತ್ತು. ಆದರೆ ಈಕೆ ಮಂತ್ರವಾದಿಗಳ ಬಳಿಗೆ ಹೋಗಿದ್ದಾಳೆ. ಅಲ್ಲಿ ಮಂತ್ರವಾದಿಯು, ನೀನು ಮಗುವೊಂದನ್ನು ಕೊಂದರೆ ನಿನಗೆ ಮಕ್ಕಳಾಗುತ್ತದೆ ಎಂಬ ಮೌಢ್ಯವನ್ನು ಮಹಿಳೆಯ ತಲೆಗೆ ತುಂಬಿದ್ದಾನೆ.

ಹಾಳು ಮನುವಾದಿಗಳ ಮೌಢ್ಯವೇ ಹೀಗೆ ಅದು, ತನ್ನನ್ನು ಅನುಸರಿಸುವವರನ್ನೂ ಕ್ರೂರಿಗಳಾಗಿಸುತ್ತದೆ. ಅಂತೆಯೇ 3 ವರ್ಷದ ಮುದ್ದು ಕಂದನನ್ನು ಕೊಂದು ಮಂತ್ರವಾದಿಯ ಬಳಿ ವಾಮಾಚಾರ ಮಾಡಿಸಿ, ಮೃತದೇಹವನ್ನು ಬ್ಯಾಗ್ ನಲ್ಲಿ ತುಂಬಿಸಿಟ್ಟಿದ್ದಳು.

ಇತ್ತ ಮಗುವಿನ ಹೆತ್ತವರು ಮಗು ನಾಪತ್ತೆಯಾಗಿದ್ದರಿಂದ ಆತಂಕಗೊಂಡು ಹುಡುಕಾಡಿದ್ದು, ಈ ವೇಳೆ ಮಹಿಳೆಯ ಮನೆಯ ಟೆರೆಸ್ ನಲ್ಲಿ ಬ್ಯಾಗ್ ನಲ್ಲಿ ತುಂಬಿಸಿಟ್ಟ ಮಗುವಿನ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಹಾದ್ರೋಯಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ