ವಿಪರೀತ ಡೌಟ್: ಪತ್ನಿಯ ಮರ್ಮಾಂಗಕ್ಕೆ ಹೊಲಿಗೆ ಹಾಕಿದ ಗಂಡ! - Mahanayaka
3:34 AM Monday 15 - September 2025

ವಿಪರೀತ ಡೌಟ್: ಪತ್ನಿಯ ಮರ್ಮಾಂಗಕ್ಕೆ ಹೊಲಿಗೆ ಹಾಕಿದ ಗಂಡ!

women
22/03/2021

ಲಕ್ನೋ: ಭಾರತದಲ್ಲಿ ಜನರಿಗೆ ಲೈಂಗಿಕ ಶಿಕ್ಷಣ ಇಲ್ಲ. ಹಾಗಾಗಿಯೇ ಇಂತಹ ಘಟನೆಗಳೆಲ್ಲ ಆಗಾಗ ನಡೆಯುತ್ತಿರುತ್ತಿರುತ್ತದೆ. ಭಾರತದಲ್ಲಿ ಲೈಂಗಿಕ ಶಿಕ್ಷಣ ನೀಡಬೇಕು ಎಂದ ಕೂಡಲೇ ಅದೇನೋ ಮಹಾಪಾಪ ಎಂದು ಅಂದುಕೊಳ್ಳುತ್ತಾರೆ. ಇಷ್ಟೆಲ್ಲ ಪೀಠಿಕೆ ಹಾಕಿದ್ದು ಯಾಕೆ ಗೊತ್ತಾ? ಇಲ್ಲೊಬ್ಬ ಗಂಡ ತನ್ನ ಪತ್ನಿಗೆ ಮಾಡಬಾರದ್ದೆಲ್ಲ ಮಾಡಿ ಇದೀಗ ಸುದ್ದಿಯಾಗಿ ಬಿಟ್ಟಿದ್ದಾನೆ.


Provided by

ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ರಾಮ್ ಪುರ ಜಿಲ್ಲೆಯ ಮಿಲಾಕ್ ಪ್ರದೇಶದಲ್ಲಿ. ಪತ್ನಿಯ ನಡತೆಯ ಮೇಲೆ ಪತಿಗೆ ವಿಪರೀತ ಅನುಮಾನ ವ್ಯಕ್ತಪಡಿಸುತ್ತಿದ್ದ. ಹೀಗಾಗಿ ದಿನನಿತ್ಯ ಮನೆಯಲ್ಲಿ ಕಂಠಮಟ್ಟ ಕುಡಿದು ಪತ್ನಿಯನ್ನು ಪತಿ ಥಳಿಸುತ್ತಿದ್ದ. ಇದು ಇಲ್ಲಿಗೆ ನಿಲ್ಲುತ್ತಿದ್ದರೆ, ಇಷ್ಟೊಂದು ದೊಡ್ಡ ವಿಷಯ ಆಗುತ್ತಿರಲಿಲ್ಲ. ಆದರೆ, ಪತ್ನಿ ಬೇರಾವುದೇ ಪುರುಷನನ್ನು ಸಮೀಪಿಸಬಾರದು ಅದಕ್ಕಾಗಿ ಏನು ಮಾಡಬೇಕು ಎಂದು ಕಂಠಮಟ್ಟ ಕುಡಿದು ಪತಿ ಯೋಚಿಸಿದ್ದು, ಬಾರ್ ನಿಂದ ನೇರವಾಗಿ ಮನೆಗೆ ಬಂದಿದ್ದಾನೆ.

ಮನೆಗೆ ಬಂದ ಪತಿ ತನ್ನ ಪತ್ನಿಯನ್ನು ಕಟ್ಟಿ ಹಾಕಿ ತಾಮ್ರದ ದಾರವನ್ನು ತಂದು ಪತ್ನಿಯ ಮರ್ಮಾಂಗವನ್ನು ಹೊಲಿಯಲು ಆರಂಭಿಸಿದ್ದಾನೆ. ಆತ ಒಂಡೆರಡು ಹೊಲಿಗೆ ಹಾಕುವಷ್ಟರಲ್ಲಿ ಮರ್ಮಾಂಗದಲ್ಲಿ ವಿಪರೀತವಾಗಿ ರಕ್ತಸ್ರಾವವಾಗಿದೆ. ಇದರಿಂದಾಗಿ ಆತ ಪತ್ನಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಇತ್ತ ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ತನ್ನ ತವರಿಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿದ್ದಾರೆ. ತಕ್ಷಣವೇ ಆಕೆಯ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಕಾಪಾಡಿದ್ದಾರೆ.

ಮರ್ಮಾಂಗವನ್ನು ಹೊಲಿಯೋದರಿಂದ  ಏನು ನಡೆಯುತ್ತದೆ ಎನ್ನುವ ಪರಿಜ್ಞಾನವೂ ಇಲ್ಲದ ಅವಿವೇಕಿಯಿಂದ ಇಂತಹ ಕೃತ್ಯ ನಡೆದಿದೆ. ಭಾರತದಲ್ಲಿ ಬಹಳಷ್ಟು ಜನರಿಗೆ ಲೈಂಗಿಕ ಜ್ಞಾನವೇ ಇಲ್ಲ. ಹಾಗಾಗಿ ಪುಟ್ಟ ಮಕ್ಕಳ ಮೇಲೆ ಕೂಡ ಅತ್ಯಾಚಾರಕ್ಕೆ ಯತ್ನಿಸುವಂತಹ ಪ್ರಯತ್ನಗಳು ನಡೆಯುತ್ತಿದೆ. ಈ ಘಟನೆ ಕೂಡ ಹಾಗೆಯೇ ಆಗಿದೆ. ಪತ್ನಿಯ ಮರ್ಮಾಂಗವನ್ನು ಹೊಲಿಯುವ ನೀಚ ಕೃತ್ಯಕ್ಕೆ ಈತ ಕೈಹಾಕಿದ್ದಾನೆ.

ಇತ್ತೀಚಿನ ಸುದ್ದಿ