ದಸರಾ ಮೆರವಣಿಗೆಯ ಮೇಲೆ ಹರಿದ ಕಾರು: 20ಕ್ಕೂ ಅಧಿಕ ಮಂದಿ ನಜ್ಜುಗುಜ್ಜು

ಜಶ್ ಪುರ: ವೇಗವಾಗಿ ಬಂದ ಕಾರೊಂದು ದಸರಾ ಮೆರವಣಿಗೆಯ ಮೇಲೆ ಹತ್ತಿದ್ದು, ಪರಿಣಾಮವಾಗಿ 20ಕ್ಕೂ ಅಧಿಕ ಮಂದಿ ನಜ್ಜುಗುಜ್ಜಾಗಿದ್ದಾರೆ. ಓರ್ವ ಗಾಯಾಳು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢ(Chhattisgarh)ದ ಜಶ್ ಪುರ ಜಿಲ್ಲೆಯ ಪಠಾಲ್ ಗಾಂವ್ ನಲ್ಲಿ ನಡೆದಿದೆ.
ಜನರು ದಸರಾ ಮೆರವಣಿಗೆ ನೋಡಲು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟರು ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ನಡೆದ ಬಳಿಕ ಅಪಘಾತಕ್ಕೆ ಕಾರಣವಾಗಿದ್ದ ಕಾರಿನಲ್ಲಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
21 ವರ್ಷ ವಯಸ್ಸಿನ ಬಬ್ಲು ಹಾಗೂ 26 ವರ್ಷ ವಯಸ್ಸಿನ ಶಿಶುಪಾಲ್ ಸಾಹು ಬಂಧಿಯ ಆರೋಪಿಗಳಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಎಲ್ಲರನ್ನು ಸ್ಥಳೀಯರ ಸಹಾಯದಿಂದ ಪಥಲ್ ಗಾಂವ್ ನಾಗರಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಛತ್ತೀಸ್ ಗಢ ಸಿಎಂ ಭೂಪೇಶ್ ಬಘೇಲ್ ಅವಘಡದ ಬಗ್ಗೆ ತನಿಖೆಗೆ ಸೂಚನೆಗಳನ್ನು ನೀಡಿದ್ದಾರೆ. ಘಟನೆ ಸಂಬಂಧ ಶೀಘ್ರವಾಗಿ ಕ್ರಮಕೈಗೊಳ್ಳಲಾಗಿದ್ದು, ಇಬ್ಬರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ: ಹೆಡ್ ಕಾನ್ಸ್ ಟೇಬಲ್ ಸಾವು
ಲಕ್ಷ್ಮೀ ಹೆಬ್ಬಾಳ್ಕರ್ ಹೆಸರಿನಲ್ಲಿ ಡಿ.ಕೆ.ಶಿವಕುಮಾರ್ ಬೇನಾಮಿ ಆಸ್ತಿ: ಮಾಜಿ ಸಚಿವ ಸೊಗಡು ಶಿವಣ್ಣ ಗಂಭೀರ ಆರೋಪ
ಬಜರಂಗದಳದಿಂದ ತ್ರಿಶೂಲ ದೀಕ್ಷೆ: ಪರಿಶೀಲನೆ ನಡೆಸಲು ಪೊಲೀಸ್ ಆಯುಕ್ತರಿಂದ ಸೂಚನೆ
ದಕ್ಷಿಣ ಕನ್ನಡ: ಭೀಮ್ ಸೇನೆಯಿಂದ ದಮ್ಮ ಚಕ್ರ ಪರಿವರ್ತನಾ ದಿನಾಚರಣೆ
ದೇವಸ್ಥಾನದ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ಗುಂಡು ಹಾರಿಸಿ ಕೊಂದ ಯುವಕರು !