“ನನ್ನ ರೂಮ್ ಗೆ ಬಂದ್ರೆ ನಿನ್ನನ್ನು ಪಾಸ್ ಮಾಡುತ್ತೇನೆ” | ವಿದ್ಯಾರ್ಥಿನಿಗೆ ಆಮಿಷ ನೀಡಿ ಪ್ರಾಧ್ಯಾಪಕನಿಂದ ಅತ್ಯಾಚಾರ! - Mahanayaka
4:01 PM Thursday 12 - December 2024

“ನನ್ನ ರೂಮ್ ಗೆ ಬಂದ್ರೆ ನಿನ್ನನ್ನು ಪಾಸ್ ಮಾಡುತ್ತೇನೆ” | ವಿದ್ಯಾರ್ಥಿನಿಗೆ ಆಮಿಷ ನೀಡಿ ಪ್ರಾಧ್ಯಾಪಕನಿಂದ ಅತ್ಯಾಚಾರ!

ranebennuru news
19/03/2021

ಹಾವೇರಿ: ನೀನು ನನ್ನ ಆಸೆ ಈಡೇರಿಸದೇ ಇದ್ದರೆ ನಿನ್ನನ್ನು ಫೇಲ್ ಮಾಡುತ್ತೇನೆ ಎಂದು ವಿದ್ಯಾರ್ಥಿನಿಯನ್ನು ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ ಬಗ್ಗೆ ರಾಣೇಬೆನ್ನೂರಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣೇಬೆನ್ನೂರು ತಾಲೂಕಿನ ಹನುಮನಟ್ಟಿ ಗ್ರಾಮದ ಕೃಷಿ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ನೂರ್ ನವಾಜ್ ಎಂಬಾತನ ಮೇಲೆ ಈ ದೂರು ದಾಖಲಾಗಿದ್ದು,  ಇದೇ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಹಲವು ಬಾರಿ ಈತ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ನನ್ನ ಆಸೆ ಈಡೇರಿಸದಿದ್ದರೆ, ನಿನ್ನನ್ನು ಫೇಲ್ ಮಾಡುತ್ತೇನೆ. ನೀನು ನನ್ನ ಆಸೆ ಈಡೇರಿಸಿದರೆ, ಪಾಸ್ ಮಾಡುತ್ತೇನೆ ಎಂದ ನೂರ್ ತನ್ನ ಛೇಂಬರ್ ನಲ್ಲಿ ವಿದ್ಯಾರ್ಥಿನಿಯ ಮೇಲೆರಗಿ ಅತ್ಯಾಚಾರ ನಡೆಸಿದ್ದಾನೆ. ಇದಾದ ಬಳಿಕ ಮನೆಗೂ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಾಧ್ಯಾಪಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ