ಆರ್ ಸಿಬಿ ತಂಡದ ನಾಯಕ ಸ್ಥಾನಕ್ಕೆ ಕಣ್ಣೀರಿನ ವಿದಾಯ ಹೇಳಿದ ವಿರಾಟ್ ಕೊಹ್ಲಿ - Mahanayaka
9:50 PM Wednesday 11 - December 2024

ಆರ್ ಸಿಬಿ ತಂಡದ ನಾಯಕ ಸ್ಥಾನಕ್ಕೆ ಕಣ್ಣೀರಿನ ವಿದಾಯ ಹೇಳಿದ ವಿರಾಟ್ ಕೊಹ್ಲಿ

virat kohli emotional
12/10/2021

ಶಾರ್ಜಾ:  ಆರ್ ಸಿಬಿ(RCB) ತಂಡದ ನಾಯಕ ಸ್ಥಾನಕ್ಕೆ ವಿರಾಟ್ ಕೊಹ್ಲಿ ಕಣ್ಣೀರಿನ ವಿದಾಯ ಹೇಳಿದ್ದಾರೆ. ತಮ್ಮ ನಾಯಕತ್ವದ 9 ಟೂರ್ನಿಯಲ್ಲೂ ಆರ್ ಸಿಬಿ ತಂಡಕ್ಕೆ ಕಪ್ ಗೆಲ್ಲಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ತಮ್ಮ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ವೃತ್ತಿ ಜೀವನಕ್ಕೆ ಆರ್ ಸಿಬಿಯ ನಿರಂತರ ಸೋಲು ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಕೆಕೆಆರ್ ವಿರುದ್ಧದ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ಅವರು ಕಣ್ಣೀರು ತಡೆದುಕೊಳ್ಳಲು ವಿಫಲ ಯತ್ನ ನಡೆಸಿದರು.  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಾನು ತಂಡದಲ್ಲಿ ಯುವ ಆಟಗಾರರಿಗೆ ಆತ್ಮವಿಶ್ವಾಸ ಮತ್ತು ಸ್ವತಂತ್ರವಾಗಿ ಆಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಭಾರತ ತಂಡದಲ್ಲಿಯೂ ನಾನು ಇಂತಹದ್ದೇ ಪ್ರಯತ್ನ ಮಾಡಿದ್ದೇನೆ. ಆರ್ ಸಿಬಿಗೆ ನಾನು ಶ್ರೇಷ್ಟ ಕೊಡುಗೆಯನ್ನೂ ನೀಡಿದ್ದೇನೆ. ಮುಂದಿನ ಮೂರು ವರ್ಷಗಳಿಗೆ ತಂಡವನ್ನು ಮತ್ತೆ ಹೊಸದಾಗಿ ಕಟ್ಟಬೇಕಾದ ಅಗತ್ಯವಿದೆ ಎಂದು ಹೇಳಿದರು.

ಐಪಿಎಲ್ ನಲ್ಲಿ ಬೇರೆ ಯಾವುದೇ ತಂಡದ ಪರವಾಗಿ ನಾನು ಆಟವಾಡುವುದಿಲ್ಲ. ಕೊನೆಯ ದಿನದ ವರೆಗೂ ನಾನು ಆರ್ ಸಿಬಿ ತಂಡದಲ್ಲಿಯೇ ಇರುತ್ತೇನೆ ಎಂದು ವಿರಾಟ ಕೊಹ್ಲಿ ಭಾವುಕರಾಗಿ ನುಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಬಾಲಕಿಗೆ ಹೆರಿಗೆಯಾದ ಬಳಿಕ ಬಾಲ್ಯ ವಿವಾಹ ಬಯಲಿಗೆ: ಬಾಲಕಿಯ ಪತಿ ಅರೆಸ್ಟ್

ಮುಟ್ಟಿನ ಸಮಯದ ನೋವನ್ನು ಕಡಿಮೆ ಮಾಡುವುದು ಹೇಗೆ?

ಮಳೆ ನೀರಿನಲ್ಲಿ ಕೊಚ್ಚಿ ಹೋದ ಲಕ್ಷಾಂತರ ರೂಪಾಯಿಯ ಮೀನುಗಳು!

ಮುಸ್ಲಿಮರ ಮುಂಗೈಗೆ ಬೆಲ್ಲ: ಕಾಂಗ್ರೆಸ್ ನ ನಿಜಬಣ್ಣವನ್ನು ಸಿ.ಎಂ.ಇಬ್ರಾಹಿಂ ಬೆತ್ತಲಾಗಿಸಿದ್ದಾರೆ | ಕಾಂಗ್ರೆಸ್ ಗೆ ಚುಚ್ಚಿದ ಬಿಜೆಪಿ

ಕೆರೆಗೆ ಹಾರಿ ಯುವತಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಕೆಲವರ ಹೆಸರು ಉಲ್ಲೇಖ

ಕಾವೂರಿನ ಮುಸ್ಲಿಮ್ ಸಹೋದರರಿಬ್ಬರ ಕೊಲೆ ಯತ್ನ ಪ್ರಕರಣ: ಆರೋಪಿಗಳ ಮೇಲೆ 307 ಪ್ರಕರಣ ದಾಖಲು: ಪಾಪ್ಯುಲರ್ ಫ್ರಂಟ್ ಶ್ಲಾಘನೆ

500ಕ್ಕೂ ಅಧಿಕ ಚಿತ್ರದಲ್ಲಿ ನಟಿಸಿದ್ದ ಹಿರಿಯ ನಟ ನೆಡುಮುಡಿ ವೇಣು ನಿಧನ

ಇತ್ತೀಚಿನ ಸುದ್ದಿ