ಭೂಕುಸಿತ ದುರಂತ | ಯೋಧರು ಸೇರಿದಂತೆ 45ಕ್ಕೂ ಹೆಚ್ಚು ಜನ ಬಲಿ - Mahanayaka
10:29 AM Wednesday 15 - January 2025

ಭೂಕುಸಿತ ದುರಂತ | ಯೋಧರು ಸೇರಿದಂತೆ 45ಕ್ಕೂ ಹೆಚ್ಚು ಜನ ಬಲಿ

18/10/2020

ಹನೋಯ್: ಮಧ್ಯ ವಿಯೆಟ್ನಾಂನಲ್ಲಿ ನಡೆದ ಪ್ರತ್ಯೇಕ ಎರಡು  ಪ್ರಕರಣ ಭೂಕುಸಿತ ದುರಂತಗಳಲ್ಲಿ ಯೋಧರು ಸೇರಿದಂತೆ 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು , ಕೆಲವರು ನಾಪತ್ತೆಯಾಗಿದ್ದಾರೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.


ADS

ಕ್ವಾಂಗ್ ಟ್ರೀ ಪ್ರಾಂತ್ಯದಲ್ಲಿ ನಿನ್ನೆ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ಗುಡ್ಡವೊಂದು ಕುಸಿದು ಸೇನಾ ಶಿಬಿರದ ಮೇಲೆ ಉರುಳಿ ಬಿದ್ದ ಪರಿಣಾಮ 22ಕ್ಕೂ ಹೆಚ್ಚು ಮಂದಿ ಭೂ ಸಮಾಧಿಯಾಗಿದ್ದಾರೆ. 8 ಸೈನಿಕರು ಆಶ್ಚರ್ಯಕರ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾರೆ.

ಇತ್ತೀಚಿನ ಸುದ್ದಿ