ಸುಶಾಂತ್‌ ಸಿಂಗ್ ಪ್ರಕರಣದ ವಿಧಿವಿಜ್ಞಾನ ವರದಿ ಸೋರಿಕೆ; ಸಿಬಿಐಗೆ ಪತ್ರ - Mahanayaka

ಸುಶಾಂತ್‌ ಸಿಂಗ್ ಪ್ರಕರಣದ ವಿಧಿವಿಜ್ಞಾನ ವರದಿ ಸೋರಿಕೆ; ಸಿಬಿಐಗೆ ಪತ್ರ

07/10/2020

ನವದೆಹಲಿ: ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ವರದಿಯನ್ನು ಏಮ್ಸ್‌ ನಿರ್ದೇಶಕ ಸುಧೀರ್ ಗುಪ್ತಾ ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ನಟನ ಕುಟುಂಬದವರು ಸಿಬಿಐಗೆ ಬುಧವಾರ ಪತ್ರ ಬರೆದಿದ್ದಾರೆ.

ವಕೀಲ ವರುಣ್ ಸಿಂಗ್ ಮೂಲಕ ಈ ಪತ್ರವನ್ನು ಸಿಬಿಐಗೆ ಕಳುಹಿಸಲಾಗಿದೆ. ‘ಪ್ರಕರಣವನ್ನು ನ್ಯಾಯಯುತ ಮತ್ತು ಸರಿಯಾಗಿ ತನಿಖೆ ನಡೆಸುವುದಕ್ಕಾಗಿ ಹೊಸ ಸಮಿತಿ ರಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಸೋರಿಕೆಯಾದ ಈ ವರದಿಯು ನಿಜವೇ ಆಗಿದ್ದರೆ ಅದು ಪಕ್ಷಪಾತದಿಂದ ಕೂಡಿದೆ. ಮಾತ್ರವಲ್ಲ ಸಮರ್ಪಕ ಸಾಕ್ಷಿಗಳನ್ನು ಒದಗಿಸದೇ ಮುಕ್ತಾಯಗೊಳಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ವಿಧಿವಿಜ್ಞಾನ ವರದಿಯನ್ನು ಪಡೆಯುವುದಕ್ಕೆ ಅನೇಕಬಾರಿ ಪ್ರಯತ್ನ ಪಟ್ಟಿದ್ದೇನೆ. ಆದರೂ ಗುಪ್ತಾ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ’ ಎಂದು ಸುಶಾಂತ್‌ ಸಿಂಗ್‌ ರಜಪೂತ್ ಅವರ ಕುಟುಂಬದ ವಕೀಲ ವಿಕಾಸ್ ಸಿಂಗ್‌ ಪತ್ರದಲ್ಲಿ ಹೇಳಿದ್ದಾರೆ.

ಗುಪ್ರಾ ನೇತೃತ್ವದ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಲ್ಲಿಸಿರಲಿಲ್ಲ. ಆದರೆ, ಮುಂಬೈನ ಕೂಪರ್ ಹಾಸ್ಪಿಟಲ್‌ನವರು ನೀಡಿದ ಅಭಿಪ್ರಾಯವನ್ನು ತಿಳಿಸಿತ್ತು ಎಂದು ಹೇಳುವ ಏಮ್ಸ್‌ ಆಸ್ಪತ್ರೆಯ ವರದಿಯನ್ನು ಕುಟುಂಬದವರು ಆಕ್ಷೇಪಿಸಿದ್ದಾರೆ.

‘ಗುಪ್ತಾ ಅವರು ಆರಂಭದಿಂದಲೂ ಮಾಧ್ಯಮಗಳ ಎದುರು ನೀಡುತ್ತಿರುವ ಸಂದರ್ಶನದಲ್ಲಿ ಕೂಪರ್ ಆಸ್ಪತ್ರೆಯ ವೈದ್ಯರು ಮತ್ತು ಮಹಾರಾಷ್ಟ್ರ ಪೊಲೀಸರನ್ನು ಅವಸರದ ಮರಣೋತ್ತರ ಪರೀಕ್ಷೆ ಮತ್ತು ಘಟನೆ ನಡೆದ ಸ್ಥಳವನ್ನು ರಕ್ಷಿಸದಿರುವ ಕುರಿತು ಆಕ್ಷೇಪಣೆ ಎತ್ತುತ್ತಿದ್ದರು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಕೂಪರ್ ಆಸ್ಪತ್ರೆಯ ಮರಣೋತ್ತರ ವರದಿಯಲ್ಲಿ ಹಲವು ದುರ್ಬಲ ಅಂಶಗಳಿದ್ದವು’ ಎಂದು ಪ್ರಸ್ತಾಪಿಸಲಾಗಿದೆ.

ದೌರ್ಬಲ್ಯಗಳನ್ನು ತೋರಿಸುತ್ತಾ, ಮ್ಯಾಜಿಸ್ಟ್ರೇಟ್‌ನ ಯಾವುದೇ ಆದೇಶವಿಲ್ಲದೆ ರಾತ್ರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಮತ್ತು ಪ್ರಪಂಚದಾದ್ಯಂತದ ವಿಧಿವಿಜ್ಞಾನ ವಿಭಾಗಗಳ ಹಲವಾರು ತಜ್ಞರು ಅಭಿಪ್ರಾಯಪಟ್ಟಂತೆ ಶಿಷ್ಟಾಚಾರ ಅನುಸರಿಸಲಿಲ್ಲ ಎಂದು ಪ್ರಸ್ತಾಪಿಸಲಾಗಿದೆ.

‘ಪತ್ರದಲ್ಲಿ ದುರ್ಬಲ ಅಂಶಗಳನ್ನು ಗುರುತಿಸಿರುವ ಜತೆಗೆ, ನ್ಯಾಯಾಧೀಶರ ಆದೇಶವಿಲ್ಲದೇ, ವಿಧಿವಿಜ್ಞಾನ ವಿಭಾಗದ ಕೆಲವು ಪರಿಣತರು ನೀಡಿರುವ ಅಭಿಪ್ರಾಯದ ಅನ್ವಯ ಶಿಷ್ಟಾಚಾರವನ್ನೂ ಪಾಲಿಸದೇ ರಾತ್ರಿ ವೇಳೆ ಶವಪರೀಕ್ಷೆ ಮಾಡಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

‘ಮರಣೋತ್ತರ ಪರೀಕ್ಷೆ ವೇಳೆ ವಿಡಿಯೊ ಚಿತ್ರೀಕರಣ ಮಾಡಿಲ್ಲ. ಮರಣೋತ್ತರ ವರದಿಯಲ್ಲಿ ಸಾವಿನ ಸಮಯವನ್ನು ಉಲ್ಲೇಖಿಸಿರಲಿಲ್ಲ. ದೇಹದ ಮೇಲಿನ ಗಾಯಗಳನ್ನು ನಿರ್ದಿಷ್ಟಪಡಿಸಲಾಗಿರಲಿಲ್ಲ. ಹೀಗಾಗಿ ಯಾವುದೇ ಅಭಿಪ್ರಾಯವಿಲ್ಲದ ಅಂತಹ ಗಾಯಗಳು ಯಾತಕ್ಕಾಗಿ ಆಗಿವೆ ಎಂಬ ಕಾರಣವನ್ನು ತಿಳಿಸಲಿಲ್ಲ’ ಎಂದು ದೂರಿದ್ದಾರೆ.

‘ವರದಿಯಲ್ಲಿ ಕಾಲು ಮುರಿದಿದ್ದನ್ನು ಉಲ್ಲೇಖಿಸಿರಲಿಲ್ಲ. ನಿಜವಾದ ವಿಧಿವಿಜ್ಞಾನ ಪರೀಕ್ಷೆಯಿಂದ ಗಮನಸೆಳೆಯಬಹುದಾದ ಹಲವು ದುರ್ಬಲ ಅಂಶಗಳು ಈ ವರದಿಯಲ್ಲಿದ್ದವು. ಇಂಥ ಕೆಲವು ಅಂಶಗಳನ್ನು ಏಮ್ಸ್‌ನ ವೈದ್ಯರೊಬ್ಬರು ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅದು ಪ್ರಸಾರವಾಗಿದೆ’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

‘ಗುಪ್ತಾ ಅವರು ಇತ್ತೀಚೆಗೆ ಸಿಬಿಐಗೆ ಸಲ್ಲಿಸಿದ ದೋಷಪೂರಿತ ವರದಿ ಒಂದೆರಡು ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಈ ಮೂಲಕ ಸುಶಾಂತ್ ಸಾವು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಮೂಲಕ ಬೇಜವಾಬ್ದಾರಿಯಿಂದ ಅವರು ಪ್ರತಿಕ್ರಿಯಸಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.

‘ಜನರ ಮನಸ್ಸಿನಲ್ಲಿ ಪ್ರಕರಣದ ಬಗ್ಗೆ ಗೊಂದಲಗಳನ್ನು ಉಂಟು ಮಾಡುವುದು, ಕೆಲವೊಂದು ಸಂಸ್ಥೆಗಳಿಗೆ ಜಾಮೀನು ಕೊಡಿಸುವುದು, ಅಪರಾಧಿಗಳಿಗೆ ಅನುಕೂಲ ಕಲ್ಪಿಸುವುದು ಹಾಗೂ ತನಿಖೆ ಹಾದಿ ತಪ್ಪಿಸುವ ಗುರಿಯೊಂದಿಗೆ ವರದಿ ಸೋರಿಕೆ ಮಾಡಿರುವುದು ಸ್ಪಷ್ಟವಾಗಿದೆ’ ಎಂದು ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಡಾ. ಸುಧೀರ್ ಗುಪ್ತಾ ಅವರ ನಡವಳಿಕೆ ಅನೈತಿಕ, ವೃತ್ತಿಪರವಲ್ಲದ ಹಾಗೂ ಸರ್ಕಾರಿ ಸೇವಾ ನಡವಳಿಕೆ ನಿಯಮಗಳು ಹಾಗೂ ವೈದ್ಯಕೀಯ ಮಂಡಳಿಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಈ ಅಪರಾಧದ ದುಷ್ಕೃತ್ಯ ಏಮ್ಸ್‌ನಂತಹ ಪ್ರಮುಖ ಸಂಸ್ಥೆಯ ಮೇಲೆ ಸಾರ್ವಜನಿಕರು ಇಟ್ಟುಕೊಂಡಿದ್ದ ನಂಬಿಕೆಯನ್ನು ದುರ್ಬಲಗೊಳಿಸಿದೆ. ಈ ತನಿಖೆ ನ್ಯಾಯಸಮ್ಮತವಾಗಿದೆಯೇ ಎಂಬ ಅನುಮಾನವನ್ನು ಲಕ್ಷಾಂತರ ಜನರ ಮನಸ್ಸಿನಲ್ಲಿ ಸೃಷ್ಟಿಸಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಕೂಪರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನ್ಯೂನತೆಗಳ ಬಗ್ಗೆ ಏಮ್ಸ್‌ ವಿಧಿವಿಜ್ಞಾನ ತಂಡವು ನಿರ್ದಿಷ್ಟ ಅಭಿಪ್ರಾಯ ನೀಡಿಲ್ಲ ಮತ್ತು ಅವರು ಮಾಡಬೇಕಾಗಿಲ್ಲ ಎಂದು ವರದಿಯನ್ನು ನೀಡಿದೆ ಎಂದು ಅದು ಹೇಳಿದೆ.

ಆದ್ದರಿಂದ, ಈ ವಿಷಯವನ್ನು ಸಿಬಿಐ ರಚಿಸಬೇಕಾದ ಮತ್ತೊಂದು ವಿಧಿವಿಜ್ಞಾನ ತಂಡಕ್ಕೆ ವಿವಿಧ ಆಸ್ಪತ್ರೆಯಿಂದ ಕ್ಷೇತ್ರದ ಅತ್ಯುತ್ತಮ ಹೆಸರುಗಳನ್ನು ತೆಗೆದುಕೊಳ್ಳುವ ಮೂಲಕ ಉಲ್ಲೇಖಿಸಬೇಕಾಗಿದೆ, ಇದರಿಂದಾಗಿ ನ್ಯಾಯಯುತ ಮತ್ತು ಸರಿಯಾದ ಮೌಲ್ಯಮಾಪನ ನಡೆಯುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

‌’ಏಮ್ಸ್‌ನ ವಿಧಿವಿಜ್ಞಾನ ತಂಡ ಕೂಪರ್ ಆಸ್ಪತ್ರೆ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿರುವ ದೋಷದ ಬಗ್ಗೆ ನಿರ್ಧಿಷ್ಟ ಅಭಿಪ್ರಾಯ ನೀಡಿಲ್ಲ. ಅವರು ನೀಡುವ ಅಗತ್ಯವೂ ಇಲ್ಲ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ಹೀಗಾಗಿ ತನಿಖೆಗಾಗಿ ಸಿಬಿಐನಿಂದ ಹೊಸ ವಿಧಿವಿಜ್ಞಾನ ಸಮಿತಿಯನ್ನು ರಚಿಸಿ, ಆ ಸಮಿತಿಗೆ ಪ್ರಕರಣವನ್ನು ಹಸ್ತಾಂತರಿಸಬೇಕು. ಈ ಸಮಿತಿಯಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವ, ಮೌಲ್ಯಮಾಪನ ಮಾಡುವಂತಹ ವಿವಿಧ ಆಸ್ಪತ್ರೆಗಳ ಖ್ಯಾತ ನಾಮರನ್ನು ನೇಮಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ