ಅಕ್ರಮ ಅಕ್ಕಿ ದಾಸ್ತಾನು ಗೋಡೌನ್ ಮೇಲೆ ತಹಶೀಲ್ದಾರ್ ದಾಳಿ : 37.5 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ ಅಧಿಕಾರಿಗಳು - Mahanayaka

ಅಕ್ರಮ ಅಕ್ಕಿ ದಾಸ್ತಾನು ಗೋಡೌನ್ ಮೇಲೆ ತಹಶೀಲ್ದಾರ್ ದಾಳಿ : 37.5 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ ಅಧಿಕಾರಿಗಳು

belthangady
29/07/2022

ADS


Provided by

ಬೆಳ್ತಂಗಡಿ: ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಿ ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ಮತ್ತು ಆಹಾರ ನಿರೀಕ್ಷಕರು ಜಂಟಿಯಾಗಿ ಸಿಬ್ಬಂದಿಗಳು  ಜತೆ ದಾಳಿ ಮಾಡಿ ವಶಪಡಿಸಿಕೊಂಡ ಘಟನೆ ಪಣಕಜೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪಣಕಜೆ ಸಮೀಪ ಗೋಡೌನ್ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಮತ್ತು ಆಹಾರ ನಿರೀಕ್ಷಕ ವಿಶ್ವ.ಕೆ ಹಾಗೂ ಸಿಬಂದಿಗಳು ಇಂದು ಮಧ್ಯಾಹ್ನ ದಾಳಿ ಮಾಡಿದ್ದಾರೆ. ದಾಳಿ ವೇಳೆ ಗೋಡೌನ್ ನಲ್ಲಿ 14.5 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಅಶೋಕ್ ಲೆಲೈಂಡ್ ಗೂಡ್ಸ್ ವಾಹನದಲ್ಲಿ ತುಂಬಿಸಿಟ್ಟ 23 ಕ್ವಿಂಟಾಲ್ ಅಕ್ಕಿ‌, ತೂಕದ ಯಂತ್ರ ಪತ್ತೆಯಾಗಿದ್ದು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಗೂಡ್ಸ್ ವಾಹನ ಚಾಲಕ ಹಾಗೂ ಮಾಲಕ ಹಾಸನ ಜಿಲ್ಲೆಯ ಲಕ್ಷ್ಮೀಪೂರ ನಿವಾಸಿ ನಂದೀಶ್ (24) ಬಂಧಿಸಲಾಗಿದೆ.


Provided by

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಆಹಾರ ನಿರೀಕ್ಷಕ ವಿಶ್ವ.ಕೆ ದೂರು ನೀಡಿದ್ದಾರೆ. ಅಕ್ರಮ ಪಡಿತರ ಅಕ್ಕಿ ದಾಸ್ತಾನು ಸ್ಥಳಕ್ಕೆ ದಾಳಿಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್‌, ಆಹಾರ ನಿರೀಕ್ಷಕ ವಿಶ್ವ‌ ಕೆ., ಕಂದಾಯ ನಿರೀಕ್ಷಕ ಪ್ರತೀಷ್, ಗ್ರಾಮಸಹಾಯಕ ಗುಣಾಕರ ಹೆಗ್ಡೆ, ಅಭಿಲಾಷ್ , ಚಾಲಕ ಸಂತೋಷ್ ಕುಮಾರ್, ಪುಂಜಾಲಕಟ್ಟೆ ಪಿಎಸ್ ಐ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ADS

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ