ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನ - Mahanayaka
11:21 PM Tuesday 24 - December 2024

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನ

16/10/2020

ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ. ಬಡವರ.ಶೋಷಿತರ. ಅಸ್ಪೃಶ್ಯರ. ಧ್ವನಿಯಾಗಿ ಸಮಾನತೆಗಾಗಿ ಹೋರಾಡಿದ ಮಹಾನ್ ಚೇತನವಾಗಿದ್ದು ಅಂತಹ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಜೀವನಚರಿತ್ರೆಯನ್ನು ಪ್ರತಿಯೊಬ್ಬ ನಾಗರಿಕರು ಅರಿತಿರುವಂತಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಭೀಮವಾದ) ಕೊಡಗು ಜಿಲ್ಲಾಧ್ಯಕ್ಷ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಕೆ.ಬಿ.ರಾಜು ತಿಳಿಸಿದರು.

ಸಮೀಪದ ಶಿರಂಗಾಲ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ. ಬಾಬಾಸಾಹೇಬರ ಕಥಾಹಂದರವನ್ನು ಹೊಂದಿರುವ ಧಾರವಾಹಿ ” ಮಹಾನಾಯಕ “ಕಿರುತೆರೆ ಧಾರವಾಹಿಯ ಫ್ಲಕ್ಸ್ ಅನಾವರಣ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಬಾಬಾಸಾಹೇಬರ ಜೀವನಾಧಾರಿತ ಧಾರಾವಾಹಿಯು ದೇಶದಾದ್ಯಂತ ಸುಮಾರು 60 ಕ್ಕೂ ಅಧಿಕ ಭಾಷೆಗಳಲ್ಲಿ ಪ್ರಸಾರಗೊಳ್ಳುತ್ತಿದೆ. ಮೊದಲಿಗೆ ಮರಾಠಿ ಭಾಷೆಯಲ್ಲಿ ಬಾಬಾಸಾಹೇಬರ ಕಥಾಹಂದರದ ಧಾರವಾಹಿ ಪ್ರಸಾರವಾಯಿತು. ನಂತರ ಇದನ್ನು ಕನ್ನಡಕ್ಕೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ರವರು ಬಾಬಾಸಾಹೇಬರ ಕಥಾಹಂದರ ಕನ್ನಡದಲ್ಲಿ ಅದ್ಭುತವಾಗಿ ಮೂಡಿ ಬರುವಂತೆ ಶ್ರಮವಹಿಸಿ ರುವುದು ಸ್ವಾಗತಾರ್ಹ. ಅದೇ ಮಾದರಿ ಬಾಬಾಸಾಹೇಬರ ಶಿಕ್ಷಣ.ಸಂಘಟನೆ. ಹೋರಾಟದ. ಹಾದಿಯ ಮೂಲಕ ಕಂಡುಕೊಂಡಂತಹಾ ಕಟುಸತ್ಯವನ್ನು ಪ್ರತಿಯೊಬ್ಬರೂ ಅರಿತು ವಿದ್ಯಾವಂತರಾಗುವ ಮೂಲಕ ಬಾಬಾಸಾಹೇಬರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಈ ದೇಶದ ಉತ್ತಮ ಸತ್ಪ್ರಜೆಗಳಾಗಬೇಕು ಎಂದು ಇದೇ ಸಂದರ್ಭ ತಿಳಿಸಿದರು.

ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಕೊಡಗು ಜಿಲ್ಲಾ ಉಪಾಧ್ಯಕ್ಷ ಎಸ್ ಕೆ ಸ್ವಾಮಿ, ಕೇವಲ ಪೆನ್ನಿನಿಂದ ಈ ಜಗತ್ತನ್ನೇ ಗೆಲ್ಲಬಹುದೆಂಬ ಹಾಗೂ ದೇಶದ ಪ್ರತಿಯೊಬ್ಬ ಕೆಳಮಟ್ಟದ ಪ್ರಜೆಯೂ ಈ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು ಎಂಬ ಕನಸನ್ನು ನನಸು ಮಾಡಿದವರು ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್. ಅವರು ದಲಿತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಯಾವುದೇ ತರಹದ ಗುಲಾಮಗಿರಿಯ ಸ್ವಾಮಿಭಕ್ತಿಗೆ ಒಳಗಾಗದೆ ಪ್ರತಿಯೊಬ್ಬರೂ ವಿದ್ಯಾವಂತರಾಗಿ ಈ ದೇಶದ ಉನ್ನತ ಹುದ್ದೆಗೆ ಏರಬೇಕೆಂಬುದು ಬಾಬಾಸಾಹೇಬರ ಕನಸಾಗಿತ್ತು. ಅಂತಹಾ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಿ ಆ ಮೂಲಕ ನಂತರ ಸಂಘಟಿತರಾಗಿ ಸಂವಿಧಾನಿಕವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಇದೇ ಸಂದರ್ಭ ತಿಳಿಸಿದರು.

ನಂತರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ್ ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭ. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸಂಗಮೇಶ್. ಉಪಾಧ್ಯಕ್ಷ ಸ್ವಾಮಿ. ಎಸ್.ವಿ.ಶಿವಣ್ಣ. ಹಿರಿಯ ಮುಖಂಡರಾದ ವೆಂಕಟಯ್ಯ. ಎಚ್ ಎಸ್ ವಸಂತ್. ಎಸ್ಸಿ ಕೇಶವ. ಎಸ್ಎಸ್ ಪ್ರವೀಣ್ ಕುಮಾರ್. ವನಜಾಕ್ಷಿ ಸಿದ್ದಯ್ಯ. ಜಯಮ್ಮ ಶ್ರೀನಿವಾಸ್. ಕುಮಾರಿ ಮಂಜು. ಲೋಲಾಕ್ಷಿ ಮಂಜುನಾಥ. ಗೌರಮ್ಮ ಶಿವಯ್ಯ. ಬೀನಾ ಸುರೇಶ್. ಎಸ್ ವಿ ಗೋವಿಂದರಾಜು. ಸೇರಿದಂತೆ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು

ಇತ್ತೀಚಿನ ಸುದ್ದಿ