ಭೀಮಾ ನದಿಯಲ್ಲಿ ಮುಳುಗಿದ ಐತಿಹಾಸಿಕ ಬೌದ್ಧ ಸ್ತೂಪ - Mahanayaka
2:29 AM Wednesday 20 - November 2024

ಭೀಮಾ ನದಿಯಲ್ಲಿ ಮುಳುಗಿದ ಐತಿಹಾಸಿಕ ಬೌದ್ಧ ಸ್ತೂಪ

16/10/2020

ಕಲಬುರ್ಗಿ: ಭೀಮಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದೇ ಸಂದರ್ಭದಲ್ಲಿ ಚಿತ್ತಾಪುರದ ಸನ್ನತಿ ಬಳಿ ನದಿಯ ದಡದಲ್ಲಿರುವ ಕನಗನಹಳ್ಳಿ ಗ್ರಾಮ ಪರಿಸರದ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಭೀಮಾ ಬ್ಯಾರೇಜ್‍ನ ಎಲ್ಲಾ ಗೇಟ್‍ಗಳ ಮೂಲಕ ನೀರು ಹೊರ ಬಿಡಲಾಗುತ್ತಿರುವುದರಿಂದ ಉಂಟಾದ ಪ್ರವಾಹವು ವ್ಯಾಪಕವಾಗಿ ವಿಸ್ತರಿಸುತ್ತಿದೆ. ಕ್ರಿ.ಪೂ. 3ನೇ ಶತಮಾನಕ್ಕೆ ಸೇರಿದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲದ ಬೌದ್ಧ ಚರಿತ್ರೆ ಸಾರುವ ಸಾವಿರಾರು ಬೌದ್ಧ ಶಿಲ್ಪಕಲೆಗಳು, ಬುದ್ಧ ವಿಹಾರ, ಬುದ್ಧನ ಮೂರ್ತಿಗಳು, ಪಾಲಿ ಭಾಷೆಯ ಶಿಲಾ ಶಾಸನ ಹೀಗೆ ಸಾವಿರಾರು ಬೌದ್ಧ ಕುರುಹುಗಳಿರುವ ಜಾಗಕ್ಕೆ ಪ್ರವಾಹದ ನೀರು ನುಗ್ಗಿದೆ.

ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಈ ಬೌದ್ಧ ನೆಲೆಯೀಗ ಜಲಪ್ರವಾಹಕ್ಕೆ ಸಿಲುಕಿದೆ. ಪ್ರವಾಹ ಉಂಟಾಗಿ ಬೌದ್ಧ ಸ್ತೂಪ ತಾಣವೀಗ‌ ನೀರಿನಲ್ಲಿ ನಿಂತಿದೆ.

ಇತ್ತೀಚಿನ ಸುದ್ದಿ