ಹಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಗಳ ಮಾಹಿತಿ ಕೇಂದ್ರ ಸ್ಥಾಪನೆ - Mahanayaka
11:11 PM Tuesday 3 - December 2024

ಹಿಮ್ಸ್ ಆಸ್ಪತ್ರೆಯಲ್ಲಿ ಒಳರೋಗಿಗಳ ಮಾಹಿತಿ ಕೇಂದ್ರ ಸ್ಥಾಪನೆ

15/10/2020

ಹಾಸನ: ಹಿಮ್ಸ್ ಬೋಧಕ ಆಸ್ಪತ್ರೆಯನ್ನು ಈಗಾಗಲೇ ನಿಗದಿತ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ಒಳರೋಗಿಗಳ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ.

ಈ ಕೇಂದ್ರದಲ್ಲಿ ರೋಗಿಗಳ ಆರೋಗ್ಯದ ಕುರಿತು ಮಾಹಿತಿಯನ್ನು ಪಡೆಯಲು ಬೆಳಗ್ಗೆ 9 ರಿಂದ ಸಂಜೆ 8 ಗಂಟೆ ವರೆಗೆ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ನಾಲ್ಕನೇಯ ಮಹಡಿ ಐ.ಸಿ.ಯು (ಡಿ-1), ಐ.ಸಿ.ಸಿ.ಯು (ಡಿ-2) ದೂರವಾಣಿ ಸಂಖ್ಯೆ: 9141012344 ಹಾಗೂ ಹೆಚ್.ಡಿ.ಯು (ಡಿ-3), ಎನ್.ಐ.ಸಿ.ಯು (ಡಿ-4), ದೂರವಾಣಿ ಸಂಖ್ಯೆ: 9141012346.ಮೂರನೇಯ ಮಹಡಿ ಸಿ-1, ಸಿ-2 ದೂರವಾಣಿ ಸಂಖ್ಯೆ: 9141012347, ಸಿ-3, ಸಿ-4 ದೂರವಾಣಿ ಸಂಖ್ಯೆ: 914102348ಗೆ ಹಾಗೂ ಎರಡನೇಯ ಮಹಡಿ ಸಸ್ಪೆಕ್ಟ್ ಐ.ಸಿ.ಯು ಮತ್ತು ವಾರ್ಡ್ (ಬಿ-2) ದೂರವಾಣಿ ಸಂಖ್ಯೆ: 9141012350, ಬಿ-3 ಮತ್ತು ಬಿ-4 ದೂರವಾಣಿ ಸಂಖ್ಯೆ: 9141012351ಗೆ ಸಂಪರ್ಕಿಸಬಹುದಾಗಿದೆ.

ವಿಶೇಷ ಸೂಚನೆ: ಪ್ರತಿ ದಿನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30ರ ತನಕ ಸದರಿ ನಂಬರ್‍ಗಳಿಗೆ ರೋಗಿಗಳ ಜೊತೆ ವೀಡಿಯೋ ಕಾಲ್‍ಗೂ ಅವಕಾಶ ಮಾಡಿಕೊಡಲಾಗಿದೆ, ಮೇಲ್ಕಂಡ ಸಮಯ ಹೊರತು ಪಡೆಸಿ ತುರ್ತು ಸಂಖ್ಯೆ: 9448720072ನ್ನು ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ