ಹೇಳಿರುವುದು ಬೇಟಿ ಬಚಾವೋ, ಮಾಡುತ್ತಿರುವುದು ಅಪರಾಧಿ ಬಚಾವೋ | ರಾಹುಲ್ ಗಾಂಧಿ ಟೀಕೆ - Mahanayaka

ಹೇಳಿರುವುದು ಬೇಟಿ ಬಚಾವೋ, ಮಾಡುತ್ತಿರುವುದು ಅಪರಾಧಿ ಬಚಾವೋ | ರಾಹುಲ್ ಗಾಂಧಿ ಟೀಕೆ

18/10/2020

ನವದೆಹಲಿ:  ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂಬ ಅಭಿಯಾನವನ್ನು ಆರಂಭಿಸಿದ ಬಿಜೆಪಿ ಸರ್ಕಾರವು ಈಗ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಟೀಕಿಸಿದ್ದಾರೆ.

ದೇಶದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮಹಿಳಾ ದೌರ್ಜನ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿಯವರು ಪ್ರಾರಂಭಿಸಿದ್ದು ಬೇಟಿ ಬಚಾವೋ… ಆದರೆ ಮಾಡುತ್ತಿರುವುದು ಅಪರಾಧಿ ಬಚಾವೂ ಎಂದು ಟೀಕಿಸಿದರು.

ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಬಿಜೆಪಿ ಶಾಸಕ, ಅವರ ಪುತ್ರ ಮತ್ತು ಬೆಂಬಲಿಗರು ಪೊಲೀಸ್ ವಶದಿಂದ ಬಲವಂತವಾಗಿ ಬಿಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಈ ಟೀಕೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ