500 ರೂ. ಆಸೆಗೆ ಬಿದ್ದು 1.50 ಲಕ್ಷ ಕಳೆದುಕೊಂಡ ವ್ಯಕ್ತಿ | ಅಲ್ಲಿ ನಡೆದ ಘಟನೆ ಏನು?
ಮೈಸೂರು: 500 ರೂಪಾಯಿಯ ಆಸೆಗೆ ಬಿದ್ದು ವ್ಯಕ್ತಿಯೋರ್ವರು 1.50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದ್ದು, ಹಣ ಡ್ರಾ ಮಾಡಲು ಹೋಗಿದ್ದ ವ್ಯಕ್ತಿಯನ್ನು ಯಾಮಾರಿಸಿದ ದುಷ್ಕರ್ಮಿಗಳು 1.50 ಲಕ್ಷ ರೂಪಾಯಿಯನ್ನು ದೋಚಿ ಪರಾರಿಯಾಗಿದ್ದಾರೆ.
ಕಲ್ಕುಣಿಕೆ ಗ್ರಾಮದ ನಿವಾಸಿ ಗಣೇಶ್ ಎಂಬವರು ಹಣ ಡ್ರಾ ಮಾಡಲು ಬ್ಯಾಂಕ್ ಗೆ ಹೋಗಿದ್ದರು. 1.50 ಲಕ್ಷ ರೂ. ಡ್ರಾ ಮಾಡಿದ ಅವರು ಬ್ಯಾಂಕ್ ನಿಂದ ಹೊರ ಬರುತ್ತಿದ್ದಂತೆಯೇ ಬ್ಯಾಂಕ್ ನ ಎದುರು 500 ರೂ. ಬಿದ್ದಿತ್ತು. ಅದೇ ಸ್ಥಳದಲ್ಲಿ ಕೆಲವು ಯುವಕರಿದ್ದರು. ಅವರು ಈ ಹಣ ನಿಮ್ಮದೇ? ಎಂದು ಕೇಳಿದ್ದರು. ಕೈಯಲ್ಲಿ 1.50 ರೂ. ಇದ್ದರೂ 500 ರೂಪಾಯಿಯನ್ನು ಕಳೆದುಕೊಳ್ಳಲು ಇಷ್ಟ ಪಡದ ಗಣೇಶ್ ಅವರು ಹಣ ಹೆ್ಕ್ಕಲು ಬಗ್ಗಿದ್ದಾರೆ. ಈ ವೇಳೆ ಯುವಕರು ಗಣೇಶ್ ಅವರ ಕೈಯಲ್ಲಿದ್ದ ಹಣದ ಬ್ಯಾಗ್ ನ್ನು ಕಿತ್ತುಕೊಂಡು ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
500 ರೂ. ಆಸೆಗೆ ಬಿದ್ದ ವ್ಯಕ್ತಿ ಇದೀಗ 1.50 ಲಕ್ಷ ರೂ. ಕಳೆದುಕೊಂಡಿದ್ದಾರೆ. ತಕ್ಷಣವೇ ಅವರು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.