1 ಗಂಟೆಯಲ್ಲಿ 172 ವಿವಿಧ ಭಕ್ಷ್ಯ ತಯಾರಿಸಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಕೇರಳದ 9 ವರ್ಷದ ಬಾಲಕ
ಕೋಝಿಕ್ಕೋಡ್: ಕೇರಳದ 9 ವರ್ಷದ ಬಾಲಕ ಬಾಲಕ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ. ಕೇವಲ 1 ಗಂಟೆಯಲ್ಲಿ 172 ವಿಧದ ಭಕ್ಷ್ಯ ತಯಾರಿಸುವ ಮೂಲಕ ಈತ ದಾಖಲೆ ಬರೆದಿದ್ದಾನೆ.
9 ವರ್ಷದ ಹಯಾನ್ ಅಬ್ದುಲ್ಲಾ, 1 ಗಂಟೆಯಲ್ಲಿ ಬಿರಿಯಾನಿ, ಜ್ಯೂಸ್, ಪ್ಯಾನ್ ಕೇಕ್, ದೋಸೆ, ಮಿಲ್ಕ್ ಶೇಕ್, ಮತ್ತು ಚಾಕೋಲೇಟ್ಸ್ ಸೇರಿದಂತೆ ವಿವಿಧ ಖಾದ್ಯಗಳನ್ನು ತಯಾರಿಸಿದ್ದಾನೆ.
ಚೆನ್ನೈನ ಶೆರ್ವುಡ್ ಹಾಲ್ ಸೀನಿಯರ್ ಸೆಕೆಂಡರಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಯಾಗಿರುವ ಹಯಾನ್, ತನ್ನ ತಾಯಿಗೆ ಅಡುಗೆ ಮಾಡಲು ಸಹಾಯ ಮಾಡುತ್ತಿದ್ದನು. ಈತನ ಪೋಷಕರು ಚೆನ್ನೈನಲ್ಲಿ ರೆಸ್ಟೋರೆಂಟ್ ಗಳನ್ನು ನಡೆಸುತ್ತಿದ್ದಾರೆ. ಅವರ ತಂದೆ ಹಶ್ನಾಸ್ ಅಬ್ದುಲ್ಲಾ ಪಯೋಲಿಯವರು ಮತ್ತು ತಾಯಿ ಫಿರೋಕ್ ಮೂಲದವರಾಗಿದ್ದಾರೆ.
ನಾನು ವೇಗವಾಗಿಅಡುಗೆ ಮಾಡುತ್ತಿದ್ದೆ. ನನ್ನ ಕುಟುಂಬ ಕೂಡ ಇದನ್ನು ಗಮನಿಸಿತ್ತು. ನನ್ನಅಡುಗೆ ಸಮಯವನ್ನು ನಾನು ರೆಕಾರ್ಡ್ ಮಾಡಲು ಆರಂಭಿಸಿದೆ. ಸ್ಪರ್ಧೆಗಾಗಿ ನಾನು ವಿಶೇಷವಾಗಿ ತಯಾರಿಯನ್ನು ಮಾಡಿಲ್ಲ ಎಂದು ಹಯಾನ್ ಹೇಳಿದ್ದಾನೆ.