ಬಿಜೆಪಿ ಸರ್ಕಾರದ ಇಂಜಿನ್ ಕೆಟ್ಟು ಹೋಗಿದೆ, ಸೈಲೆನ್ಸರ್ ಸದ್ದು ಮಾಡ್ತಿದೆ: ಯು.ಟಿ.ಖಾದರ್

u t khadar
08/11/2022

ಮಂಗಳೂರು: ಬಿಜೆಪಿಯ ಸರಕಾರದ ಇಂಜಿನ್ ಕೆಟ್ಟು ಹೋಗಿದೆ. ಸೈಲೆನ್ಸರ್ ಮಾತ್ರ ಸದ್ದು ಮಾಡುತ್ತಿದೆ ಎಂದು ಶಾಸಕ ಯು.ಟಿ.ಖಾದರ್ ವ್ಯಂಗ್ಯ ಮಾಡಿದ್ದಾರೆ.

ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರಕಾರ 2019ರಿಂದ ಈವರೆಗಿನ ಬಜೆಟ್ ನ ಭರವಸೆ, ಘೋಷಣೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದರು.

ಪಣಜಿಯಿಂದ ಮಂಗಳೂರಿಗೆ ವಾಟರ್ ವೇ ಇನ್ನೂ ಆರಂಭ ಆಗಿಲ್ಲ. ಸಾಗರ ಮಾಲ ಯೋಜನೆ ಬಗ್ಗೆ ಕಳೆದ ಐದು ವರ್ಷಗಳಿಂದ ಮಾತನಾಡುತ್ತಿದ್ದಾರೆ. ಮೀನುಗಾರರಿಗೆ ಮನೆ ಕೊಡುವುದಾಗಿ ಹೇಳಿ ಇನ್ನೂ ಕೊಟ್ಟಿಲ್ಲ. ಒಳನಾಡು ಮೀನುಗಾರಿಕೆಯಡಿ ಸಿಗಡಿ ಕೃಷಿ ಇನ್ನೂ ಗುರಿ ತಲುಪಿಲ್ಲ. ಕೇರಳ ಮಾದರಿ ಸಾಲ ಪರಿಹಾರ ಆಯೋಗ ರಚನೆ ಇನ್ನೂ ಆಗಿಲ್ಲ. ಒಟ್ಟಿನಲ್ಲಿ ಮೀನುಗಾರರಿಗೆ ಬಿಜೆಪಿ ಸರಕಾರ ಮೋಸ ಮಾಡಿದ್ದಷ್ಟು ಯಾರೂ ಮಾಡಿಲ್ಲ. ಮೀನುಗಾರರ ಮುಗ್ಧತೆಯ ಲಾಭ ಪಡೆಯುತ್ತಾರೆ ಎಂದು ಯು.ಟಿ.ಖಾದರ್ ಆರೋಪಿಸಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version