9 ಗಂಟೆಗೆ ಅಂಗಡಿ ಬಂದ್ ಮಾಡಿ 10 ಗಂಟೆಗೆ ಮನೆ ಸೇರಿಕೊಳ್ಳಿ | ಪೊಲೀಸರ ಎಚ್ಚರಿಕೆ!

kamal panth
10/04/2021

ಬೆಂಗಳೂರು: ರಾತ್ರಿ 9 ಗಂಟೆಗೆ ಅಂಗಡಿಗಳನ್ನು ಮುಚ್ಚಿ 10 ಗಂಟೆ ಒಳಗಾಗಿ ಮನೆ ಸೇರಿಕೊಳ್ಳಬೇಕು ಇದು ಸಾರ್ವಜನಿಕರಿಗೆ ಪೊಲೀಸರು ನೀಡಿರುವ ಎಚ್ಚರಿಕೆ!

ನೈಟ್ ಕರ್ಫ್ಯೂ ಎನ್ನುವ ಸರ್ಕಾರದ ಮೂರ್ಖತನಕ್ಕೆ ಸಾರ್ವಜನಿಕರು ಮತ್ತೆ ತೊಂದರೆಗೀಡಾಗುವ ಭಯಾತಂಕದಲ್ಲಿದ್ದರೆ ಎನ್ನುವ ಆಕ್ರೋಶಗಳ ನಡುವೆಯೇ , ಇತ್ತ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ 9 ಗಂಟೆಗೆ ಅಂಗಡಿ ಬಂದ್ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಯಾರೂ ರಾತ್ರಿ 10 ಗಂಟೆ ಮೇಲೆ ಬೆಂಗಳೂರಿನಲ್ಲಿ ಓಡಾಡುವ ಹಾಗಿಲ್ಲ. ಸರಿಯಾದ ಸಮಯಕ್ಕೆ ಅಂಗಡಿ, ಶಾಪ್ ಗಳನ್ನು ಮುಚ್ಚಿದರೆ ಸರಿಯಾದ ಸಮಯಕ್ಕೆ ಮನೆಗೆ ತೆರಳಲು ಸಾಧ್ಯವಾಗುತ್ತದೆ  9 ಗಂಟೆಗೆ ಅಂಗಡಿ ಬಂದ್ ಮಾಡಿ 10 ಗಂಟೆಗೆ ಮನೆ ಸೇರಿಕೊಳ್ಳಬೇಕು ಎಂಧು ಹೇಳಿದ್ದಾರೆ.

ಸುತ್ತೋಲೆಯಲ್ಲಿ ಯಾರಿಗೆ ಅವಕಾಶ ನೀಡಲಾಗಿದೆಯೋ ಅವರು ಮಾತ್ರ ಓಡಾಡಲು ಅವಕಾಶ ಪಡೆದಿದ್ದಾರೆ. ಉಳಿದಂತೆ ಯಾರಿಗೂ ನೈಟ್ ಕರ್ಫ್ಯೂ ಪಾಸ್ ನೀಡಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version