ಜೀವ ವಿಮೆ ಖರೀದಿಸುವಾಗ ಗಮನಿಸಬೇಕಾದ 10 ಮುಖ್ಯ ಅಂಶಗಳು

ಜೀವ ವಿಮೆ ಖರೀದಿಸುವಾಗ ಈ ಕೆಳಗಿನ 10 ಅಂಶಗಳನ್ನು ನೀವು ಮುಖ್ಯವಾಗಿ ಗಮನಿಸಬೇಕಿದೆ. ಅವು ಈ ಕೆಳಗಿನಂತಿವೆ.
ನಿಮ್ಮ ಹ್ಯೂಮನ್ ಲೈಫ್ ವ್ಯಾಲ್ಯೂ (ಹೆಚ್ ಎಲ್ ವಿ) ತಿಳಿದುಕೊಂಡು ಅದಕ್ಕೆ ತಕ್ಕಂತೆ ಜೀವ ವಿಮೆಯನ್ನು ಖರೀದಿಸಿ.
ನಿಮ್ಮ ಬದುಕಿನ ಹಂತ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಜೀವನದ ಗುರಿಗಳಿಗೆ ಅನುಗುಣವಾಗಿ ಜೀವ ವಿಮೆ ಉತ್ಪನ್ನಗಳನ್ನು ಆಯ್ಕೆ ಮಾಡಿ.
ನಿಮ್ಮ ಗುರಿಗೆ ತಕ್ಕಂತೆ ಪಾಲಿಸಿಯ ಅವಧಿ ಮತ್ತು ಪ್ರೀಮಿಯಂ ಮೊತ್ತವನ್ನು ನಿರ್ಧರಿಸಿ.
ಅತ್ಯಂತ ಕಡಿಮೆ ಬೆಲೆಯ ಯೋಜನೆ ನಿಮಗೆ ಸೂಕ್ತ ಆಗಿರಲಿಕ್ಕಿಲ್ಲ ಎಂಬುದನ್ನು ಗಮನದಲ್ಲಿಡಿ.
ಪಾಲಿಸಿಯ ವೈಶಿಷ್ಟ್ಯಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಯಮಗಳು ಮತ್ತು ಷರತ್ತುಗಳನ್ನು ಸಹ ಪರಿಶೀಲಿಸಿ.
ಉತ್ತಮ ಪ್ರಯೋಜನ ಮತ್ತು ರಿಸ್ಕ್ ಕವರ್ ಒದಗಿಸುವ ಆಡ್- ಆನ್ ರೈಡರ್ ಗಳನ್ನು ಖರೀದಿಸಿ.
ಅರ್ಜಿ ಫಾರ್ಮ್ ಅನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಮತ್ತು ಪೂರ್ಣ ವಿವರಗಳನ್ನು ತಿಳಿಸಿ.
ನಿಮ್ಮ ಪಾಲಿಸಿಗೆ ನಾಮಿನಿಯನ್ನು ನೇಮಿಸಿ ಮತ್ತು ಅವರು ಅದರ ಬಗ್ಗೆ ತಿಳಿದಿರುವಂತೆ ನೋಡಿಕೊಳ್ಳಿ.
ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇ-ವಿಮೆ ಖಾತೆಯಲ್ಲಿ (ಇಐಎ) ಸೇವ್ ಮಾಡಿ.
ವಿಮೆ ಪಾಲಿಸಿಗಳು 30 ದಿನಗಳ ಫ್ರೀಲುಕ್ ಆಫರ್ನೊಂದಿಗೆ ಬರುತ್ತವೆ, ಇದು ಒಂದು ವಿಶಿಷ್ಟ ಆಫರ್ ಆಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7