10 ರೋಗಿಗಳ ಕಣ್ಣು ಕಿತ್ತುಕೊಂಡ ಬ್ಯ್ಲಾಕ್ ಫಂಗಸ್!
27/06/2021
ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯ ಬೆನ್ನಲ್ಲೇ ಜನರಿಗೆ ಮತ್ತೊಂದು ಶಾಕ್ ನೀಡಿದ್ದ ಬ್ಲ್ಯಾಕ್ ಫಂಗಸ್ ಹುಬ್ಬಳ್ಳಿಯಲ್ಲಿ 10 ಮಂದಿಯ ದೃಷ್ಟಿಯನ್ನು ಸಂಪೂರ್ಣವಾಗಿ ಕಿತ್ತುಕೊಂಡಿದೆ.
ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಂಡು ಬಂದ ಈ ಬ್ಲ್ಯಾಕ್ ಫಂಗಸ್ ನಿಂದಾಗಿ ಹುಬ್ಬಳ್ಳಿಯ ಕಿಮ್ಸ್ ನಲ್ಲಿ 46 ಜನರಿಗೆ ದೃಷ್ಟಿ ದೋಷ ಕಂಡು ಬಂದಿತ್ತು. ಹಲವರಿಗೆ ಮೂಗಿನ ಮೂಲಕ ಸೋಂಕು ಹಬ್ಬಿ ಕಣ್ಣಿನ ನರಗಳಿಗೆ ಸಮಸ್ಯೆ ಉಂಟು ಮಾಡಿತ್ತು. ಇದೀಗ 10 ಜನರ ದೃಷ್ಟಿಯನ್ನೇ ಬ್ಲ್ಯಾಕ್ ಫಂಗಸ್ ಕಿತ್ತು ಕೊಂಡಿದೆ.
ಕಣ್ಣುಗಳಿಗೆ ತೊಂದರೆಯಾಗಿರುವವರಿಗೆ ಕಣ್ಣುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ಕಿಮ್ಸ್ ವೈದ್ಯರು ಹೊರ ತೆಗೆದಿದ್ದಾರೆ ಎಂದು ವರದಿಯಾಗಿದೆ. ಕೊರೊನಾ ಬೆನ್ನಲ್ಲೇ ಚಿತ್ರ ವಿಚಿತ್ರ ಕಾಯಿಲೆಗಳಿಂದ ಜನರು ತತ್ತರಿಸಿ ಹೋಗಿದ್ದಾರೆ. ಎಂದೂ ಕಂಡರಿಯದ ರೋಗಗಳನ್ನು ಜನರು ಕಾಣುವಂತಾಗಿದೆ.