ದೇವಸ್ಥಾನದ ಅರ್ಚಕನಿಂದ 10 ವರ್ಷದ ಮುಸ್ಲಿಮ್ ಬಾಲಕಿಯ ಅತ್ಯಾಚಾರ | ಕಾಮುಕ ಅರ್ಚಕನ ಬಂಧನ - Mahanayaka
10:05 AM Wednesday 15 - January 2025

ದೇವಸ್ಥಾನದ ಅರ್ಚಕನಿಂದ 10 ವರ್ಷದ ಮುಸ್ಲಿಮ್ ಬಾಲಕಿಯ ಅತ್ಯಾಚಾರ | ಕಾಮುಕ ಅರ್ಚಕನ ಬಂಧನ

26/11/2020

ಬೆಂಗಳೂರು: ಕಥುವಾದಲ್ಲಿ ಪುಟ್ಟ ಮುಸ್ಲಿಮ್ ಮಗುವನ್ನು ದೇವಸ್ಥಾನದಲ್ಲಿಯೇ ಅತ್ಯಾಚಾರ ನಡೆಸಿದ್ದಂತಹದ್ದೇ ಪ್ರಕರಣವೊಂದು ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದ್ದು,  10 ವರ್ಷದ ಮುಸ್ಲಿಮ್ ಬಾಲಕಿಯ ಮೇಲೆ ದೇವಸ್ಥಾನದ ಅರ್ಚಕನೇ ಅತ್ಯಾಚಾರ ಎಸಗಿದ್ದಾನೆ.

ಬಾಲಕಿ ದೇವನಹಳ್ಳಿ ಸಮೀಪದ ಚೌಡೇಶ್ವರಿ ದೇವಸ್ಥಾನದ  ಬಳಿ ಆಟವಾಡುತ್ತಿದ್ದಳು. ಬಳಿಕ ನಾಪತ್ತೆಯಾಗಿದ್ದಳು. ಅಲ್ಲಿಯೇ ಇದ್ದ ಮುನಿಯಮ್ಮ ಎಂಬವರನ್ನು  ಕೇಳಿದಾಗ ಸಂತ್ರಸ್ತ ಬಾಲಕಿ ದೇವಸ್ಥಾನದ ಬದಿಯಲ್ಲಿ ಹೋಗಿದ್ದಾಳೆ ಎಂದು ಹೇಳಿದ್ದರು. ಬಾಲಕಿಯ ತಂದೆ ಹೋಗಿ ನೋಡಿದಾಗ ಬಾಲಕಿ ದೇವಸ್ಥಾನದ ಅರ್ಚಕನ ಮನೆಯಿಂದ ಅಳುತ್ತಾ ಹೊರ ಬರುತ್ತಿದ್ದಳು. ಈ ವೇಳೆ ಬಾಲಕಿಯನ್ನು ವಿಚಾರಿಸಿದಾಗ ಅರ್ಚಕ ಬಾಲಕಿಯನ್ನು ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.


ADS

61 ವರ್ಷದ ದುಷ್ಟ ಅರ್ಚಕ ವೆಂಕಟರಮಣಪ್ಪ ಈ ಅತ್ಯಾಚಾರ ನಡೆಸಿದ್ದು, ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆಯೇ ಬಾಲಕಿಯ ಪೋಷಕರು ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.  ಪೋಷಕರ ದೂರಿನಂತೆಯೇ ಕಾಮುಕ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.

 

ಇತ್ತೀಚಿನ ಸುದ್ದಿ