ಗುನಾದಲ್ಲಿ ಕೊಳವೆ ಬಾವಿಗೆ ಬಿದ್ದ 10 ವರ್ಷದ ಬಾಲಕ; ರಕ್ಷಣಾ ಕಾರ್ಯ ಚುರುಕು
ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಶನಿವಾರ 10 ವರ್ಷದ ಬಾಲಕನೊಬ್ಬ 140 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುನಾ ಪೊಲೀಸರ ಪ್ರಕಾರ, ಸುಮಿತ್ ಮೀನಾ ಎಂದು ಗುರುತಿಸಲ್ಪಟ್ಟ ಬಾಲಕ ಗಾಳಿಪಟ ಹಾರಿಸುವಾಗ ಬೋರ್ ವೆಲ್ ನ ತೆರೆದ ಗುಂಡಿಗೆ ಬಿದ್ದಿದ್ದಾನೆ.
ಗುನಾ ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ಪಿಪ್ಲಿಯಾ ಗ್ರಾಮದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಈ ಕೊಳವೆಬಾವಿ ಸುಮಾರು 140 ಅಡಿ ಆಳದಲ್ಲಿದೆ ಎಂದು ಗುನಾ ಜಿಲ್ಲಾಧಿಕಾರಿ ಸತೇಂದ್ರ ಸಿಂಗ್ ತಿಳಿಸಿದ್ದಾರೆ.
ಮಗುವನ್ನು ರಕ್ಷಿಸಲು 25 ಅಡಿ ಆಳದ ಸಮಾನಾಂತರ ಗುಂಡಿಯನ್ನು ಅಗೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಬೋರ್ ವೆಲ್ ನಲ್ಲಿ ನೀರು ಬರಲಿಲ್ಲ. ಆದ್ದರಿಂದ ಅದರ ಮೇಲೆ ಯಾವುದೇ ಕವಚವನ್ನು ಹಾಕಲಾಗಿಲ್ಲ ಎಂದು ಕಲೆಕ್ಟರ್ ಹೇಳಿದರು.
ಪೊಲೀಸರು ಮತ್ತು ಇತರ ಸ್ಥಳೀಯ ಸಂಸ್ಥೆಗಳು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ ಎಫ್) ತಂಡವೂ ಶನಿವಾರ ಸಂಜೆ ಭೋಪಾಲ್ ನಿಂದ ಆಗಮಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj