ಗಾಝಾ ನಿರಾಶ್ರಿತರ ಸಹಾಯಕ್ಕೆ 10,000 ಟ್ರಕ್‌ಗಳು ಎಂಟ್ರಿ: ಅನ್ನ ಮತ್ತು ನೀರು ಇಲ್ಲದೆ ನರಳಾಡುತ್ತಿದ್ದ ಜನರಿಗೆ ನೆರವು

07/02/2025

ಕಳೆದ ತಿಂಗಳು ಇಸ್ರೇಲ್ ಮತ್ತು ಗಾಝಾ ಪಟ್ಟಿ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಗಾಝಾ ನಿರಾಶ್ರಿತರ ಸಹಾಯಕ್ಕೆ 10,000 ಟ್ರಕ್‌ಗಳು ಎಂಟ್ರಿಯಾಗಿವೆ. ಅನ್ನ ಮತ್ತು ನೀರು ಇಲ್ಲದೆ ನರಳಾಡುತ್ತಿದ್ದ ಜನರಿಗೆ ನೆರವಾಗುತ್ತಿವೆ. ಹೀಗಾಗಿ ಗಾಝಾ ಪಟ್ಟಿಯಲ್ಲಿ ಒಂದಷ್ಟು ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ.

ಗಾಝಾ ಪಟ್ಟಿ ಗಡಿಯಲ್ಲಿ ನಿಂತಿದ್ದ ಟ್ರಕ್‌ಗಳು ಒಂದೇ ಬಾರಿಗೆ ಗಾಝಾದ ಒಳಗೆ ನುಗ್ಗಿದ ಹಿನ್ನೆಲೆ ಜನರು ಕೂಡ ಒಮ್ಮೆಲೆ ಮುಗಿಬಿದ್ದಿದ್ದಾರೆ. ಅದರಲ್ಲೂ ನೀರಿಗಾಗಿ ಸಾಕಷ್ಟು ಸಮಸ್ಯೆ ಇದ್ದು ಜನರು ನೀರು ಕಂಡ ತಕ್ಷಣ ಮುಗಿಬಿದ್ದಿದ್ದಾರೆ. ಸಾಧ್ಯವಾದಷ್ಟು ನೀರಿನ ಬಾಟಲ್ ಎತ್ತುಕೊಂಡು ಹೋಗಿದ್ದಾರೆ. ಬರದ ನಾಡಾಗಿರುವ ಗಾಝಾ ಪಟ್ಟಿಯಲ್ಲಿ ಯುದ್ಧದ ನಂತರ ನೀರಿಗೆ ಜನರು ಇನ್ನಷ್ಟು ನರಳಾಡುವಂತೆ ಆಗಿದೆ.

ಗಾಝಾ ಪಟ್ಟಿ ಜನರು ಯುದ್ಧ ನಿಂತರೂ ನೆಮ್ಮದಿಯಾಗಿ ಜೀವನ ನಡೆಸಲು ಆಗುತ್ತಿಲ್ಲ. ಈ ರೀತಿ ಪರದಾಡುತ್ತಿರುವ ಗಾಜಾ ನಿರಾಶ್ರಿತರಿಗೆ ನೆರವಾಗಲು ಜಗತ್ತಿನಾದ್ಯಂತ ವಿವಿಧ ದೇಶಗಳ ನಾಯಕರು ಭಾರೀ ದೊಡ್ಡ ಪ್ರಮಾಣದ ನೆರವಿನ ಸಾಮಗ್ರಿ ಕಳುಹಿಸಿದ್ದರು. ಆದರೆ ಯುದ್ಧ ನಿಲ್ಲದ ಕಾರಣ ಹಲವು ದಿನಗಳಿಂದ ಗಡಿಯಲ್ಲೇ ಅಗತ್ಯ ವಸ್ತುಗಳ ಟ್ರಕ್ ನಿಂತಿದ್ದವು. ಹೀಗಾಗಿ ಗಾಝಾ ಪಟ್ಟಿ ಜನರು ಕೂಡ ಅಗತ್ಯ ವಸ್ತುಗಳಿಗಾಗಿ ಒದ್ದಾಡಿ ಹೋಗಿದ್ದರು.

ಹೀಗಿದ್ದಾಗಲೇ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಝಾ ಪಟ್ಟಿಯ ಮೇಲೆ ಹಕ್ಕು ಸಾಧಿಸುವ ಬಗ್ಗೆ ಮಾತನಾಡಿರುವುದು ಆತಂಕ ಮತ್ತೆ ಮೂಡುವಂತೆ ಮಾಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version