ಪರೀಕ್ಷೆ ಬರೆದು ಪಾಸ್ ಆದ 104 ವರ್ಷದ ಕುಟ್ಟಿಯಮ್ಮಗೆ ಅಭಿನಂದನೆಗಳ ಮಹಾಪೂರ

ತಿರುವನಂತಪುರಂ: ಕೇರಳ ಸರ್ಕಾರ ಕಳೆದ ವಾರ ನಡೆಸಿದ್ದ ಪ್ರಾಥಮಿಕ ಸಾಕ್ಷರತೆ ಪರೀಕ್ಷೆಯಲ್ಲಿ 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರು 100 ಅಂಕದಲ್ಲಿ 89 ಅಂಕವನ್ನು ಗಳಿಸಿದ್ದು, ಇದೀಗ ಕುಟ್ಟಿಯಮ್ಮನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.
ಕೇರಳ ರಾಜ್ಯ ಸಾಕ್ಷರತಾ ಮಿಷನ್ ನ ವಿದ್ಯಾರ್ಥಿಗಳ ಪ್ರಾಥಮಿಕ ಜ್ಞಾನ ಪರೀಕ್ಷಿಸಲು ನಡೆಸಿದ ಮಿಗವುಲ್ಸವಂ ಅಂಗವಾಗಿ ನಡೆಸಿದ ಪರೀಕ್ಷೆಯಲ್ಲಿ ಕುಟ್ಟಿಯಮ್ಮ 100 ಅಂಕಗಳಲ್ಲಿ 89 ಅಂಕಗಳನ್ನು ಪಡೆದುಕೊಂಡು ತೇರ್ಗಡೆಯಾಗಿದ್ದಾರೆ. ಈ ಮೂಲಕ ಅವರು ನಾಲ್ಕನೇ ತರಗತಿಯ ಸಮಾನ ಸಾಕ್ಷರತಾ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿದ್ದಾರೆ.
ಇನ್ನೂ ಕೇರಳ ರಾಜ್ಯದ ಶಿಕ್ಷಣ ಸಚಿವ ವಿ.ಶಿವನ್ ಕುಟ್ಟಿ, ಕುಟ್ಟಿಯಮ್ಮ ಕುರಿತು ಮಾತನಾಡುತ್ತಾ, ಅಕ್ಷರ, ಪದ ಮತ್ತು ಜ್ಞಾನ ಜಗತ್ತಿಗೆ ಪ್ರವೇಶಿಸಲು ವ್ಯಕ್ತಿಯ ವಯಸ್ಸು ಅಡ್ಡಿಯಾಗುವುದಿಲ್ಲ ಎನ್ನುವುದನ್ನು ಕುಟ್ಟಿಯಮ್ಮ ತೋರಿಸಿಕೊಟ್ಟಿದ್ದಾರೆ. ಗುರಿಯನ್ನು ಸಾಧಿಸುವ ಮನಸ್ಸಿದ್ದರೆ ಸಾಕು, ವಯಸ್ಸು ಎನ್ನುವುದು ಕೇವಲ ಸಂಖ್ಯೆ ಅಷ್ಟೆ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG
ಇನ್ನಷ್ಟು ಸುದ್ದಿಗಳು
ಅವನಿಗೆ ನನ್ನ ದೃಷ್ಟಿಯೇ ತಾಗಿತೇನೋ… | ಕಣ್ಣೀರು ಹಾಕುತ್ತಲೇ ಮಾತನಾಡಿದ ನಟ ಶಿವರಾಜ್ ಕುಮಾರ್
ಬಿಟ್ ಕಾಯಿನ್ ಪ್ರಮುಖ ಆರೋಪಿ ಶ್ರೀಕಿಯ ಎನ್ ಕೌಂಟರ್ ಸಾಧ್ಯತೆ?
ಅಪಘಾತದಲ್ಲಿ ಮೃತಪಟ್ಟ ಪುನೀತ್ ಅಭಿಮಾನಿ ಕೊನೆಯ ಕ್ಷಣದಲ್ಲಿ ಪತ್ನಿಗೆ ಹೇಳಿದ ಮಾತು ಕಣ್ಣೀರು ತರಿಸುತ್ತದೆ!
ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: 14 ರಾಜ್ಯಗಳ 76 ಸ್ಥಳಗಳಲ್ಲಿ ಜಾಲಾಡಿದ ಸಿಬಿಐ
ಕುಡಿದು ತೂರಾಡುತ್ತಾ, ತೊದಲು ಮಾತನಾಡುತ್ತಾ ಶಾಲೆಗೆ ಪಾಠ ಮಾಡಲು ಬಂದ ಶಿಕ್ಷಕ
ಪ್ರತಾಪ್ ಸಿಂಹ ಹೆಣ್ಣೋ ಗಂಡೋ ಎಂದು ನೋಡಿಕೊಳ್ಳಲಿ | ಇಕ್ಬಾಲ್ ಅನ್ಸಾರಿ ತಿರುಗೇಟು