ಶಾಲೆಯ ಎದುರೇ 10ನೇ ತರಗತಿಯ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಸ್ನೇಹಿತರು
ಉತ್ತರಪ್ರದೇಶ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಸಹಪಾಠಿಗಳು 10ನೇ ತರಗತಿಯ ಬಾಲಕನನ್ನು ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಈ ಘಟನೆ ನಡೆದಿದ್ದು , ಶಾಲೆಯಿಂದ ಹೊರಗಡೆ ಈ ಘಟನೆ ನಡೆದಿದೆ.
ಅಮರ್ ಸಿಂಗ್ ಹಾಗೂ ವಿಕ್ರಮ್ ಕುಮಾರ್ ಎಂಬ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಜಗಳದಿಂದ ತೀವ್ರವಾಗಿ ಆಕ್ರೋಶಗೊಂಡಿದ್ದ ವಿಕ್ರಮ್ ಕುಮಾರ್, ಮನೆಗೆ ಬಂದ ಬಳಿಕ ತನ್ನ ನೆರೆಯ ಮನೆಯ 16 ವರ್ಷ ವಯಸ್ಸಿನ ವಂಶ್ ಜೊತೆಗೆ ಈ ವಿಚಾರ ಹೇಳಿದ್ದಾನೆ. ವಂಶ್ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಅಮರ್ ಸಿಂಗ್ ಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ವಂಶ್ ಬೆದರಿಕೆ ಹಾಕಿದ್ದರಿಂದ ಕೋಪಗೊಂಡ ಅಮರ್ ಸಿಂಗ್ ತನ್ನ 19 ವರ್ಷ ವಯಸ್ಸಿನ ಸಹೋದರ ವಿನಯ್ ಜೊತೆಗೆ ಸೇರಿ ಬೈಕ್ ನಲ್ಲಿ ಬಂದು ವಂಶ್ ಮೇಲೆ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದ್ದ ಆರೋಪಿಗಳು ಶಾಲೆಯ ಮುಂದೆಯೇ ವಂಶ್ ನನ್ನು ಗುಂಡು ಹಾರಿಸಿ ಹತ್ಯೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಹತ್ಯೆ ನಡೆಸಿದ ಅಮರ್ ಹಾಗೂ ವಿನಯ್ ಗೆ ಇವರ ಸ್ನೇಹಿತ ಸೌರಭ್ ಎಂಬಾತ ಬೈಕ್ ಒದಗಿಸಿದ್ದ. ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ವಿದ್ಯಾರ್ಥಿಗಳ ಕೈಗೆ ಪಿಸ್ತೂಲ್ ಹೇಗೆ ಸಿಕ್ಕಿತು ಎನ್ನುವುದರ ಬಗ್ಗೆ ಇದೀಗ ತನಿಖೆ ಆರಂಭಗೊಂಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಕ್ಷೇಪಾರ್ಹ ಪೋಸ್ಟ್ ಹರಡಿದ ಬಜರಂಗದಳದ ಕಿಡಿಗೇಡಿಯ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ
ಹಿಂದುತ್ವದಿಂದ ಚುನಾವಣೆ ಗೆಲ್ಲಬಹುದು ಎನ್ನುವ ಬಿಜೆಪಿಯ ನಿರೀಕ್ಷೆಗೆ ಶಾಕ್ ನೀಡಿದ ಯಡಿಯೂರಪ್ಪ ಹೇಳಿಕೆ!
ಪರ್ಸಂಟೇಜ್ ಪಿತಾಮಹಾ ಸಿದ್ದರಾಮಯ್ಯ: ಕುಮಾರಸ್ವಾಮಿ ಟ್ವೀಟ್ ಬಾಣ
ಮಂಗಳೂರು: ಮೀನಿನ ಫ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ: ಐವರು ಕಾರ್ಮಿಕರ ದಾರುಣ ಸಾವು
ಮಹಿಳೆಯ ಮೇಲೆಯೇ ಹರಿದ ಕೆಎಸ್ಸಾರ್ಟಿಸಿ ಬಸ್: ಮಹಿಳೆಯ ದಾರುಣ ಸಾವು