ಶಾಕಿಂಗ್ ನ್ಯೂಸ್: ಯುವತಿಯ ಮೇಲೆ 10ನೇ ತರಗತಿಯ ಬಾಲಕನಿಂದ ಅತ್ಯಾಚಾರಕ್ಕೆ ಯತ್ನ
ಮಲಪ್ಪುರಂ: 10ನೇ ತರಗತಿಯ 15 ವರ್ಷ ವಯಸ್ಸಿನ ವಿದ್ಯಾರ್ಥಿಯೋರ್ವ ಯುವತಿಯೋರ್ವಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಕೇರಳದ ಕೊಂಡೊಟ್ಟಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅತ್ಯಾಚಾರಕ್ಕೆ ಯತ್ನಿಸಿದ ಬಾಲಕನಿಗೆ ಯಾವುದೇ ಅಪರಾಧ ಪ್ರಕರಣಗಳ ಹಿನ್ನೆಲೆ ಇಲ್ಲ ಮತ್ತು ಸಂತ್ರಸ್ತ 21 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಹೇಳುವ ಪ್ರಕಾರ, ಆತ ಹಿಂದೆಂದೂ ಈ ರೀತಿಯಾಗಿ ವರ್ತಿಸಿದವನಲ್ಲ. ಆದರೆ ಇದೀಗ ಆತ ಅತ್ಯಾಚಾರಕ್ಕೆ ಯತ್ನಿಸಿರುವುದು ಖಚಿತವಾಗಿದೆ ಎಂದು ಘಟನೆ ಸಂಬಂಧ ಮಲಪ್ಪುರಂ ಎಸ್ ಪಿ ಸುಜಿತ್ ದಾಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಯ ವಿವರ:
ಸಂತ್ರಸ್ತೆಗೆ ಪರಿಚಯಸ್ಥನೇ ಆಗಿದ್ದ ಬಾಲಕನು ಏಕಾಏಕಿ ಆಕೆಯ ಮೇಲೆ ಮುಗಿ ಬಿದ್ದು ಲೈಂಗಿಕ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಯುವತಿಯು ಸ್ಥಳದಿಂದ ಓಡಲು ಯತ್ನಿಸಿದಾಗ ಆಕೆಯ ಮುಖಕ್ಕೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾನೆ. ಹೇಗೋ ಅಲ್ಲಿಂದ ಯುವತಿ ತಪ್ಪಿಸಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ಯುವತಿ ತಪ್ಪಿಸಿಕೊಂಡು ಓಡಿ ಹೋಗಿರುವುದನ್ನು ಕಂಡ ಬಾಲಕ, ಆಕೆಯ ಯಾರ ಬಳಿಯಾದರೂ ಈ ವಿಚಾರ ತಿಳಿಸಬಹುದು ಅಂದುಕೊಂಡು ಸ್ಥಳದಿಂದ ಪರಾರಿಯಾಗಿ ತನ್ನ ಮನೆಗೆ ಹೋಗಿದ್ದಾನೆ. ಈ ವೇಳೆ ಆತನ ಬಟ್ಟೆಯಲ್ಲಿ ಆಗಿದ್ದ ಕೊಳೆ ಹಾಗೂ ಪರಚಿದ ಗಾಯವನ್ನು ಕಂಡು ಮನೆಯವರು ಏನಾಗಿದೆ ಎಂದು ಗಾಬರಿಯಿಂದ ವಿಚಾರಿಸಿದಾಗ, ನಾಯಿ ಅಟ್ಟಿಸಿಕೊಂಡು ಬಂದಾಗ ಬಿದ್ದು ಗಾಯವಾಗಿದೆ ಎಂದು ಸುಳ್ಳು ಹೇಳಿ ಮನೆಯವರನ್ನು ನಂಬಿಸಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಬೆದರಿದ ಯುವತಿಯು ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆ ಪೊಲೀಸರು ಬಾಲಕನ ಮನೆಗೆ ಹೋಗಿ ವಿಚಾರಣೆ ನಡೆಸಿದಾಗ, ಯುವತಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದಾಗ ತನಗೆ ಗಾಯಗಳಾಗಿವೆ ಎನ್ನುವುದನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb