11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ - Mahanayaka

11 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ

yediyurappa
10/06/2021

ಬೆಂಗಳೂರು:  ಕೊವಿಡ್ ಸೋಂಕು ಹೆಚ್ಚಿರುವ 11 ಜಿಲ್ಲೆಗಳಾದ  ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕೆ ಮಾಡಲಾಗಿದೆ.


Provided by

ಸಿಎಂ ಗೃಹ ಕಚೇರಿಯಲ್ಲಿಂದು ಅಧಿಕಾರಿಗಳು ಹಾಗೂ ಸಚಿವರ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಮಾಹಿತಿ ನೀಡಿದ್ದಾರೆ.  ಕೊರೊನಾ ಸೋಂಕು ಹೆಚ್ಚಿರುವ ಈ 11 ಜಿಲ್ಲೆಗಳಲ್ಲಿ  ಜೂ.21ರವರೆಗೆ  ಲಾಕ್ ಡೌನ್ ಯಥಾ ಸ್ಥಿತಿಯಲ್ಲಿರಲಿದೆ ಎಂದು ಅವರು ತಿಳಿಸಿದರು.

ಇನ್ನುಳಿದ ಜಿಲ್ಲೆಗಳಲ್ಲಿ  ಜೂನ್ 14ರಿಂದ ಜೂನ್ 21ರವರೆಗೆ ಅನ್ವಯವಾಗುವಂತೆ,  ಶೇ.50ರಷ್ಟು ಹಾಜರಿಯೊಂದಿಗೆ ಕೈಗಾರಿಕೆಗಳಲ್ಲಿ ಅನುಮತಿ ನೀಡಲಾಗಿದ್ದು, ಸರ್ಕಾರಿ ಕೈಗಾರಿಕೆಗಳಲ್ಲಿ ಶೇ.30ರಷ್ಟು ಹಾಜರತಿಗೆ ಅನುಮತಿ ನೀಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ  ಮಧ್ಯಾಹ್ನ 2ರವರೆಗೆ ಅವಕಾಶವಿದೆ.  ಎಲ್ಲ ನಿರ್ಮಾಣ ಚಟುವಟಿಕೆ, ಅದಕ್ಕೆ ಸಂಬಂಧಿಸಿದ ಅಂಗಡಿ ತೆರೆಯಲು ಅವಕಾಶವಿದೆ ಎಂದು ಸಿಎಂ ತಿಳಿಸಿದರು.


Provided by

ಇನ್ನೂ 5ರಿಂದ 10ರವರೆಗೆ ಪಾರ್ಕ್ ಗೆ ಅವಕಾಶವಿದೆ. ಬೆಳಗ್ಗೆ 6ರಿಂದ 2ರವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆಟೋ, ಟ್ಯಾಕ್ಸಿಗಳನ್ನು ಇಬ್ಬರು ಪ್ರಯಾಣಿಕರಿಗೆ ಮಾತ್ರವೇ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ