250 ರೂಪಾಯಿ ಸಾಲ ಪಡೆದು ಲಾಟರಿ ಖರೀದಿಸಿದ್ರು: ಕೇರಳದ 11 ಪೌರಕಾರ್ಮಿಕ ಮಹಿಳೆಯರಿಗೆ ಸಿಕ್ತು ಕೋಟಿ ಕೋಟಿ ಬಹುಮಾನ
250 ರೂಪಾಯಿ ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಕೇರಳದ 11 ಪೌರಕಾರ್ಮಿಕ ಮಹಿಳೆಯರ ಅದೃಷ್ಟ ಖುಲಾಯಿಸಿದೆ. ಕೇರಳ ಲಾಟರಿ ಇಲಾಖೆ ನಡೆಸುವ ಡ್ರಾನಲ್ಲಿ 10 ಕೋಟಿ ರೂಪಾಯಿ ಬಹುಮಾನ ಲಭಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆಯರು, ನಾವೆಲ್ಲರೂ ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೆಟ್‍ಗಳನ್ನು ಖರೀದಿಸಿದ್ದೆವು. ಇದೇ ಮೊದಲ ಬಾರಿಗೆ ಗೆದ್ದಿದ್ದೇವೆ. ಬಹುಮಾನ ಗೆಲ್ಲುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ನಮ್ಮ ಟಿಕೆಟ್‍ಗೆ ಬಹುಮಾನ ಬಂದಿರುವುದು ತಿಳಿದಾಗ ಖುಷಿಯಾಯಿತು. ನಮಗೆ ವೇತನ ಹೊರತುಪಡಿಸಿ ಯಾವುದೇ ಆದಾಯ ಮೂಲಗಳಿಲ್ಲ. ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣ ಸಹಕಾರವಾಗಲಿದೆ ಎಂದು ಖುಷಿಹಂಚಿಕೊಂಡಿದ್ದಾರೆ.
ನಗರಸಭೆಯ ಹರಿತಾ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ಈ ಬಾರಿ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ಶ್ರಮಜೀವಿಗಳಾಗಿದ್ದಾರೆ. ಅವರೆಲ್ಲ ಹೆಚ್ಚಾಗಿ ಸಾಲದಲ್ಲಿದ್ದಾರೆ. ಅಲ್ಲದೇ ಮದುವೆಗೆ ಬಂದಿರುವ ಹೆಣ್ಣು ಮಕ್ಕಳಿದ್ದಾರೆ. ಕೆಲವರು ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಬೇಕಿದೆ. ಆರ್ಥಿಕವಾಗಿ ಅವರು ಭದ್ರವಾಗಿಲ್ಲ. ಅಂಥವರಿಗೆ ಈ ಲಾಟರಿ ಒಲಿದಿರುವುದು ಖುಷಿ ನೀಡಿದೆ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw