11 ಮಹಿಳೆಯರು ಸಾವಿಗೀಡಾದ ಅಪಘಾತಕ್ಕೆ ಅಶೋಕ್ ಖೇಣಿಯೇ ಕಾರಣ | ಸಾರ್ವಜನಿಕರ ಆಕ್ರೋಶ - Mahanayaka
4:03 AM Thursday 19 - September 2024

11 ಮಹಿಳೆಯರು ಸಾವಿಗೀಡಾದ ಅಪಘಾತಕ್ಕೆ ಅಶೋಕ್ ಖೇಣಿಯೇ ಕಾರಣ | ಸಾರ್ವಜನಿಕರ ಆಕ್ರೋಶ

17/01/2021

ಧಾರವಾಡ: ಶುಕ್ರವಾರ ಧಾರವಾಡದಲ್ಲಿ ನಡೆದ ಭೀಕರ ಅಪಘಾತದಲ್ಲಿ 11 ಮಹಿಳೆಯರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಘಟನೆಗೆ ನೈಸ್ ಸಂಸ್ಥೆಯ ಮಾಲಕ ಅಶೋಕ್ ಖೇಣಿಯೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತವಾಗಿದೆ.

ಈ ಬಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಸಿಸಿ ಸದಸ್ಯ ದೀಪಕ್ ಚಿಂಚೋರೆ, ಹುಬ್ಬಳ್ಳಿ-ಧಾರವಾಡ ರಸ್ತೆಯ ಇಟಗಟ್ಟಿ ಕ್ರಾಸ್ ಬಳಿಯಲ್ಲಿ ನಡೆದಿರುವ ದುರಂತಕ್ಕೆ ಅಶೋಕ್ ಖೇಣಿ ಅವರನ್ನೇ ನೇರ ಹೊಣೆ ಮಾಡಬೇಕು ಎಂದು  ಆಗ್ರಹಿಸಿದ್ದಾರೆ.

ಈ ಪ್ರದೇಶದಲ್ಲಿ ಈ ಹಿಂದೆಯೂ ಹಲವು ದುರಂತಗಳು ಸಂಭವಿಸಿವೆ. ನೂರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅಶೋಕ್ ಖೇಣಿ ಅವರಿಗೆ ಈ ರಸ್ತೆ ನಿರ್ಮಾಣ, ನಿರ್ವಹಣೆ ಹಾಗೂ ಶುಲ್ಕ ಸಂಗ್ರಹದ ಆಧಾರದಲ್ಲಿ ನೀಡಲಾಗಿದೆ.  ಆದರೆ ಅವರು ಇಲ್ಲಿ ರಸ್ತೆ ಮಾಡದಂತೆ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಾ ವಿಸ್ತರಣೆಗೆ ಅಡ್ಡಿಯೊಡ್ಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.


Provided by

ಈ ರಸ್ತೆಯ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸಚಿವ ಜಗದೀಶ್ ಶೆಟ್ಟರ್ ಅವರು ಖೇಣಿ ಜೊತೆಗೆ ಮಾತುಕತೆ ನಡೆಯುತ್ತಿದೆ ಎಂದೇ ಹೇಳುತ್ತಿದ್ದಾರೆ. ಆದರೆ ಇಲ್ಲಿವರೆಗೂ ಒಂದೇ ಒಂದು ಕೆಲಸವಾಗಿಲ್ಲ. ನೈಸ್ ಸಂಸ್ಥೆ ಕೋಟ್ಯಂತರ ಟೋಲ್ ಸಂಗ್ರಹಿಸುತ್ತಿದೆ. ಇಲ್ಲಿ ಮೇಲಿಂದ ಮೇಲೆ ಅಪಘಾತಗಳು ನಡೆಯುತ್ತಲೇ ಇದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ