11 ಯುವತಿಯರನ್ನು ಮದುವೆಯಾದ  23 ವರ್ಷದ ಯುವಕ - Mahanayaka

11 ಯುವತಿಯರನ್ನು ಮದುವೆಯಾದ  23 ವರ್ಷದ ಯುವಕ

16/01/2021

ಚೆನ್ನೈ: ಚೆನ್ನೈ ಮೂಲದ 23 ವರ್ಷದ ಯುವಕನೋರ್ವ 11 ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ತಮಿಳುನಾಡಿನಲ್ಲಿ ಇದೀಗ ಈ ಸುದ್ದಿ ವ್ಯಾಪಕ ಆಕ್ರೋಶವನ್ನುಂಟು ಮಾಡಿದೆ.


Provided by

23 ವರ್ಷ ಗಣೇಶ್ ಎಂಬಾತ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು, ಮದುವೆಯಾಗುತ್ತಿದ್ದ. ಒಬ್ಬರ ಹಿಂದೊಬ್ಬರನ್ನು ಮದುವೆಯಾಗುತ್ತಾ, ಒಬ್ಬರ ವಿಚಾರ ಇನ್ನೊಬ್ಬರಿಗೆ ತಿಳಿಯದಂತೆ  ಸಂಸಾರ ಮಾಡುತ್ತಿದ್ದ.  ಆದರೆ, 11ನೇ ಮದುವೆಯಾದಾಗ ಆತ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ಕೊಳತ್ತೂರು ಮೂಲದ 20 ವರ್ಷದ ಯುವತಿಯ ಬಳಿ ಪ್ರೀತಿಯ ನಾಟಕವಾಡಿದ್ದ ಗಣೇಶ್,  ಆಕೆಯೊಂದಿಗೆ ಕಳೆದ ವರ್ಷ ಡಿಸೆಂಬರ್ 5ರಂದು ಓಡಿ ಹೋಗಿ ಮದುವೆಯಾಗಿದ್ದ. ಮಗಳ ಕಾಣದಿದ್ದ ಸಂದರ್ಭ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಪ್ರತಿಯಾಗಿ ಗಣೇಶ್ ಕೂಡ ದೂರು ನೀಡಿದ್ದು, ನಮಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದ. ಠಾಣೆಯಲ್ಲಿ ಗಣೇಶನ ಅಸಲಿ ವಿಚಾರ ತಿಳಿಯದ ಹುಡುಗಿ, ತಾನು ಗಣೇಶನ ಜೊತೆ ಸಂತೋಷದಲ್ಲಿದ್ದೇನೆ ಎಂದು ಹೇಳಿದ್ದಳು. ಇಬ್ಬರೂ ವಯಸ್ಕರಾಗಿರುವ ಕಾರಣ, ಪೊಲೀಸರು ಅವರನ್ನು ಜೊತೆಯಾಗಿ ಹೋಗಲು ಅವಕಾಶ ನೀಡಿದ್ದಾರೆ.

ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಗಣೇಶ್ 17 ವರ್ಷದ ಹುಡುಗಿಯನ್ನು ಕರೆದುಕೊಂಡು ಬಂದು,  ಮನೆ ಕೆಲಸಕ್ಕೆ ಇರಲಿ ಎಂದು ಪತ್ನಿಗೆ ಹೇಳಿದ್ದಾನೆ. ಆಗ ಮನೆ ಕೆಲಸಕ್ಕೆ ಜನ ಬೇಡ ಎಂದು ಪತ್ನಿ ಹೇಳಿದರೂ ಆತ ಕೇಳಲಿಲ್ಲ. ದಿನ ಕಳೆದಂತೆ ಆತನ ವರ್ತನೆಗಳ ಬದಲಾದವು. ಆತ ಕೆಲಸದಾಕೆಯ ಜೊತೆಗೆ ಪತ್ನಿಯ ಎದುರಲ್ಲೇ ಸರಸವಾಡಲು ಆರಂಭಿಸುತ್ತಾನೆ.  ಪತ್ನಿ ಆಕ್ಷೇಪಿಸಿದಾಗ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ 17 ವರ್ಷದ ಯುವತಿಯ ಜೊತೆಗೆ ಸರಸವಾಡಲು ಆರಂಭಿಸಿದ್ದಾನೆ. ಇದಾದ ಬಳಿಕ ತನ್ನ ಸ್ನೇಹಿತನನ್ನು ಮನೆಗೆ ಕರೆದುಕೊಂಡು ಬಂದು, ಆತನ ಜೊತೆಗೆ ಪತ್ನಿಯನ್ನು ಸಂಬಂಧ ಹೊಂದುವಂತೆ ಬಲವಂತ ಮಾಡುತ್ತಾನೆ. ಇದಕ್ಕೆ ಒಪ್ಪದಿದ್ದ ವೇಳೆ ಮೃಗೀಯವಾಗಿ ವರ್ತಿಸಿದ್ದಾನೆ. ಈ ವೇಳೆ ಹೇಗೋ ಅಲ್ಲಿಂದ ಕಾಲ್ಕಿತ್ತು. ಮನೆಯ ಮಾಲಿಕನ ಸಹಾಯ ಪಡೆದು ತವರು ಸೇರಿದ್ದಾಳೆ.

ತವರಿಗೆ ಬಂದ ಯುವತಿ ಘಟನೆಯನ್ನು ವಿವರಿಸಿದ್ದು, ಇದರಿಂದಾಗಿ ಪೋಷಕರು ಗಣೇಶ್ ವಿರುದ್ಧ ದೂರು ನೀಡುತ್ತಾರೆ.  ಈ ದೂರಿನನ್ವಯ ಗಣೇಶ್ ನನ್ನು ಪೊಲೀಸರು ಬಂಧಿಸುತ್ತಾರೆ. ಬಂಧನದ ಬಳಿಕ ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾನು ಇಲ್ಲಿಯವರೆಗೆ 11 ಮದುವೆಯಾಗಿರುವುದಾಗಿ ಸತ್ಯ ಕಕ್ಕಿದ್ದಾನೆ. 11 ಮದುವೆಯಾಗಿದ್ದರೂ, ಈಗಲೂ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು,  ಅವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದೇನೆ ಎಂದು ಆತ ವಿವರಿಸಿದ್ದಾನೆ.

ಇದೀಗ ಈತನಿಂದ ವಂಚನೆಕ್ಕೊಳಗಾಗಿರುವ ಯುವತಿಯರು ಧೈರ್ಯವಾಗಿ ದೂರು ದಾಖಲಿಸುವಂತೆ ಪೊಲೀಸರು ಕೋರಿದ್ದು,  ಈತನಿಂದ ವಂಚನೆಗೊಳಗಾದವರು ದೂರು ನೀಡಿದ್ದಲ್ಲಿ,  ಅವರಿಗೆ ರಕ್ಷಣೆ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ವಿವೇಚನೆ ಇಲ್ಲದ ಚಿಕ್ಕ ವಯಸ್ಸಿನ ಯುವರಿಯರನ್ನೇ ಟಾರ್ಗೆಟ್ ಮಾಡಿಕೊಂಡು ಈತ 11 ಮದುವೆಯಾಗಿದ್ದಾನೆ.

ಇತ್ತೀಚಿನ ಸುದ್ದಿ