3 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ: ಬಾಲಕನ ಕೃತ್ಯ ಸಮರ್ಥಿಸಿದ ತಂದೆ - Mahanayaka

3 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ: ಬಾಲಕನ ಕೃತ್ಯ ಸಮರ್ಥಿಸಿದ ತಂದೆ

indore
01/06/2022

ಇಂದೋರ್:  3 ವರ್ಷದ ಬಾಲಕಿಯನ್ನು 12 ವರ್ಷದ ಬಾಲಕನೋರ್ವ ಚಾಕಲೇಟ್ ಕೊಡಿಸುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಇಂದೋರ್‌ನ ಬಂಗಂಗಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಮಗು ಕಿರಾಣಿ ಅಂಗಡಿಗೆ ಹೋಗಿದ್ದಾಗ  ಅಡ್ಡಗಟ್ಟಿದ ಬಾಲಕ ಚಾಕಲೇಟ್ ಕೊಡಿಸುವ ನೆಪದಲ್ಲಿ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ಇತ್ತ ಮನೆಯಿಂದ ಹೋದ ಬಾಲಕ  ವಾಪಸ್ ಬಾರದ ಹಿನ್ನೆಲೆಯಲ್ಲಿ ತಾಯಿ ಹುಡುಕಾಟ ನಡೆಸಿದ ವೇಳೆ ಬಾಲಕಿಯು ಬಾಲಕನ ಮನೆಯಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಘಟನೆ ಬೆಳಕಿಗೆ ಬಂದ ತಕ್ಷಣವೇ ಆರೋಪಿ ಬಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ಬಾಲಕಿಯು ನಡೆದ ಘಟನೆಯನ್ನು ತನ್ನ ತಾಯಿಗೆ ತಿಳಿಸಿದ್ದು, ಬಳಿಕ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಇನ್ನಿತರ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಲಾಗಿದೆ.

ಇನ್ನೊಂದೆಡೆ ಮಗನ ದುಷ್ಕೃತ್ಯವನ್ನು ತಂದೆ ಸಮರ್ಥಿಸಿಕೊಂಡಿದ್ದು, ಬಾಲಕಿಯ ಪೋಷಕರಿಗೆ ಬೆದರಿಕೆ ಹಾಕಿದ್ದಾನೆ. ಬಾಲಕ ಗೊತ್ತಿಲ್ಲದೇ ಕೃತ್ಯ ಮಾಡಿದ್ದಾನೆ. ನೀವು ಪೊಲೀಸರಿಗೆ ದೂರು ನೀಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ಎಂದು ಆರೋಪಿಸಲಾಗಿದ್ದು, ಬಾಲಕ ತಂದೆಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ: ಇಂದಿನಿಂದಲೇ ಅನ್ವಯ

ಹನುಮ ಜನ್ಮ ಸ್ಥಳ ವಿವಾದ: ಧರ್ಮ ಸಂಸತ್ ನಲ್ಲಿ ಸ್ವಾಮೀಜಿಗಳ ಕಿರಿಕ್:  ಮೈಕ್ ನಿಂದ ಹೊಡೆಯಲು ಹೋದ ಸ್ವಾಮೀಜಿ!

ಸಂಗೀತ ಕಾರ್ಯಕ್ರಮದ ಬಳಿಕ ಹೃದಯಾಘಾತದಿಂದ ಮೃತಪಟ್ಟ ಖ್ಯಾತ ಗಾಯಕ

ಪಠ್ಯಪುಸ್ತಕದ ವಿಚಾರದಲ್ಲಿ ಸತ್ಯದ ವಿಷಯ ಮರೆಮಾಚುವ ಕೆಲಸ ಆಗ್ತಿದೆ: ಸದಾನಂದ ಗೌಡ

ಆ್ಯಂಬುಲೆನ್ಸ್-ಟ್ರಕ್ ನಡುವೆ ಭೀಕರ ಅಪಘಾತ: ರೋಗಿ ಸಹಿತ 7 ಮಂದಿ ಸಾವು

 

ಇತ್ತೀಚಿನ ಸುದ್ದಿ