12 ವರ್ಷದ ಬಾಲಕಿಯ ಮೇಲೆ ಮಲತಂದೆ, ನೆರೆ ಮನೆಯ ವ್ಯಕ್ತಿಯಿಂದ ಅತ್ಯಾಚಾರ!

shivamogga
08/09/2021

ಶಿವಮೊಗ್ಗ: ಮಲತಂದೆ ಹಾಗೂ ನೆರೆಯ ಮನೆಯ ವ್ಯಕ್ತಿ  ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆ ದಾಖಲಿಸಲಾಗಿದೆ.

ಮೊದಲ ಪತ್ನಿಯನ್ನು ತ್ಯಜಿಸಿದ್ದ 36 ವರ್ಷ ವಯಸ್ಸಿನ ವ್ಯಕ್ತಿಯೋರ್ವ ಬಯಲು ಸೀಮೆಗೆ ಕೂಲಿ ಕೆಲಸಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ಆತನಿಗೆ ವಿಧವೆಯೊಬ್ಬರ ಪರಿಚಯವಾಗಿತ್ತು.  ಆಕೆಗೆ ಓರ್ವಳು ಮಗಳು ಕೂಡ ಇದ್ದಳು. ಆ ವಿಧವೆಯನ್ನು ವಿವಾಹವಾಗಿದ್ದ ಆರೋಪಿಯು  ಸ್ವಗ್ರಾಮದಲ್ಲಿಯೇ ನೆಲೆಸಿದ್ದ.

ಪತ್ನಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಆರೋಪಿಯ ಕಣ್ಣು 12 ವರ್ಷ ವಯಸ್ಸಿನ ಬಾಲಕಿಯ ಮೇಲೆ ಬಿದ್ದಿದೆ. ಆತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಾದ ಬಳಿಕ ಆರೋಪಿ ಮಲತಂದೆ ಹಾಗೂ ತಾಯಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಪಕ್ಕದ ಮನೆಯ 43 ವರ್ಷ ವಯಸ್ಸಿನ ವ್ಯಕ್ತಿ ಕೂಡ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಶಾಲೆ ಆರಂಭದ ನಂತರ ಮಂಕಾಗಿದ್ದ ಬಾಲಕಿಯನ್ನು ಶಿಕ್ಷಕರು ಪ್ರಶ್ನಿಸಿದ್ದು, ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಶಿಕ್ಷಕರ ಸಮಯ ಪ್ರಜ್ಞೆಯಿಂದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದ್ದು, ಈ ಸಂಬಂಧ ಮಾಳೂರು ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಸುದ್ದಿಗಳು…

ನಿಶ್ಚಿತಾರ್ಥವಾದ ಬೆನ್ನಲ್ಲೇ ಗಂಡಿಗೆ ಶಾಕ್ ನೀಡಿದ ಯುವತಿ | ಚಿನ್ನಾಭರಣದೊಂದಿಗೆ ಪರಾರಿ, ತಾಯಿಗೂ ಟೋಪಿ ಹಾಕಿದ ಮಗಳು!

ಪ್ರೀತಿಸಿ ವಿವಾಹವಾಗಿದ್ದವರನ್ನು ಜಾತಿಗಾಗಿ ಬೇರ್ಪಡಿಸಿದರು! | ಫೇಸ್ ಬುಕ್ ಲೈವ್ ಗೆ ಬಂದು ಯುವಕ ಆತ್ಮಹತ್ಯೆ

ಡ್ರಗ್ಸ್ ಕಂಟಕ: ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು? | ರೂಮ್ ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದಳು ಎಂದ ಕಿಶೋರ್ ಶೆಟ್ಟಿ?

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್ ಐ ಅರ್ಜುನ್ ಗೆ ಜೈಲೇ ಗತಿ

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: 7ನೇ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್

ಬ್ರಾಹ್ಮಣರು ಹಾಗೂ ದಲಿತರು ಒಂದಾಗಬೇಕು | ಬಿಎಸ್ ಪಿ ವರಿಷ್ಠೆ ಮಾಯಾವತಿ ಕರೆ

ಕೃಷಿ ಇಲಾಖೆಯಲ್ಲಿ 210 ಕೋಟಿ ರೂ. ಭ್ರಷ್ಟಾಚಾರ: ಬಿ.ಸಿ.ಪಾಟೀಲ್ ವಿರುದ್ಧ ಎಸಿಬಿಗೆ ದೂರು

ಇತ್ತೀಚಿನ ಸುದ್ದಿ

Exit mobile version