1,240 ದೇವಸ್ಥಾನಗಳಲ್ಲಿ ಆರೆಸ್ಸೆಸ್ ನಿಷೇಧ - Mahanayaka
1:44 AM Wednesday 5 - February 2025

1,240 ದೇವಸ್ಥಾನಗಳಲ್ಲಿ ಆರೆಸ್ಸೆಸ್ ನಿಷೇಧ

rss
03/04/2021

ಕುಂಬಳೆ: ಕೇರಳದ ಐದು ದೇವಸ್ವ ಬೋರ್ಡಗಳಲ್ಲಿ ಒಂದಾದಿರುವ ತಿರುವಾಂಕೂರು ದೇವಸ್ವ ಬೋರ್ಡ್(ಟಿಡಿಬಿ) ತನ್ನ ಅಧೀನದ 1,240 ದೇವಸ್ಥಾನಗಳಲ್ಲಿ ಬಿಜೆಪಿ ಪಕ್ಷದ ನಿಯಂತ್ರಣ ಸಂಘಟನೆಯಾಗಿರುವ ಆರೆಸ್ಸೆಸ್ ನನ್ನು ಕಾರ್ಯಚಟುವಟಿಕೆಯಿಂದ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ದೇವಾಲಯದ ಆವರಣದಲ್ಲಿ ಆರೆಸ್ಸೆಸ್ ಶಾಖೆ, ಶಾರೀರಿಕ್ ಅಥವಾ ಪಥ ಸಂಚಲನ ಮೊದಲಾದ ಚಟುವಟಿಕೆ ನಡೆಸುವಂತಿಲ್ಲ. ನಿಷೇಧ ಉಲ್ಲಂಘಿಸಿ ಆರೆಸ್ಸೆಸ್ ದೇವಾಲಯದ ಆವರಣಕ್ಕೆ ತಲೆ ಇಟ್ಟರೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಘಿದೆ.

ಕೇರಳದ ಹಲವು ದೇವಸ್ಥಾನಗಳಲ್ಲಿ ಆರೆಸ್ಸೆಸ್ ಚಟುವಟಿಕೆ ಮೆಲ್ಲಗೆ ಆರಂಭವಾಗಿದ್ದು, ಬಿಜೆಪಿ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಆರೆಸ್ಸೆಸ್ ರಾಜಕೀಯ ಉದ್ದೇಶಗಳಿಗಾಗಿ ದೇವಸ್ಥಾನ ಹಾಗೂ ಇನ್ನಿತರ ಧಾರ್ಮಿಕ ಕೇಂದ್ರಗಳಲ್ಲಿ ಕಾರ್ಯಾಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ