ಅಣ್ಣಾಮಲೈ ವಿರುದ್ಧ ಆಕ್ರೋಶ: ಬಿಜೆಪಿಗೆ ಏಕಕಾಲದಲ್ಲಿ ರಾಜೀನಾಮೆ ನೀಡಿದ 13 ಪದಾಧಿಕಾರಿಗಳು!

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ಕಾರ್ಯನಿರ್ವಹಣೆಯಿಂದ ಅಸಮಾಧಾನಗೊಂಡು ಸುಮಾರು 13 ಪದಾಧಿಕಾರಿಗಳು ಏಕಕಾಲದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಘಟನೆ ನಡೆದಿದೆ.
ರಾಜೀನಾಮೆ ನೀಡಿದ 13 ಬಿಜೆಪಿ ಪದಾಧಿಕಾರಿಗಳು ಎಐಎಡಿಎಂಕೆ(AIADMK) ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಅಣ್ಣಾಮಲೈ ಅವರ ವರ್ತನೆಯಿಂದ ಬೇಸತ್ತು ಬಿಜೆಪಿ ತೊರೆದಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿ ತೊರೆದವರೆಲ್ಲರೂ ಚೆನ್ನೈ ವೆಸ್ಟ್ ನ ಬಿಜೆಪಿ ಐಟಿ ಸೆಲ್ ನ ಪದಾಧಿಕಾರಿಗಳಾಗಿದ್ದಾರೆ, ಇವರೆಲ್ಲರೂ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಪಕ್ಷವಾಗಿರುವ ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿಯಲ್ಲಿ ಕೆಲವು ದಿನಗಳಿಂದ ಅಸಮರ್ಪಕವಾದ ಬೆಳವಣಿಗೆಗಳು ನಡೆಯುತ್ತಿದ್ದು, ಹೀಗಾಗಿ ಪಕ್ಷ ತೊರೆಯುತ್ತಿದ್ದೇವೆ ಎಂದು ಬಿಜೆಪಿ ಐಟಿ ಸೆಲ್ ನ ಜಿಲ್ಲಾ ಅಧ್ಯಕ್ಷ ಅನ್ಬರಸನ್ ಅವರು ಪಕ್ಷ ತೊರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ತಮಿಳುನಾಡು ಬಿಜೆಪಿ ವಿರುದ್ಧ ಪಕ್ಷದ ಪದಾಧಿಕಾರಿಗಳೇ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಣ್ಣಾಮಲೈ ಅವರ ನಾಯಕತ್ವದ ವಿರುದ್ಧ ಪಕ್ಷದೊಳಗಡೆಯೇ ಸಾಕಷ್ಟು ಅಸಮಾಧಾನಗಳಿವೆ ಅನ್ನೋ ಆರೋಪಗಳು ಕೂಡ ಕೇಳಿ ಬಂದಿವೆ. ಈ ನಡುವೆ, ತಮಿಳುನಾಡು ಬಿಜೆಪಿ ಘಟಕವು ಎಐಎಡಿಎಂಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ನಾಯಕರನ್ನು ಎಐಎಡಿಎಂಕೆ ಖರೀದಿಸುತ್ತಿದೆ ಅನ್ನೋ ಗಂಭೀರ ಆರೋಪ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw