13 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರಿಂದಲೇ ಅತ್ಯಾಚಾರ! - Mahanayaka

13 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರಿಂದಲೇ ಅತ್ಯಾಚಾರ!

06/03/2021

ಉತ್ತರಪ್ರದೇಶ:13 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಆಲಿಗಢದಲ್ಲಿ ನಡೆದಿದ್ದು, ಅತ್ಯಾಚಾರದ ಬಳಿಕ ಸಂತ್ರಸ್ತ ಬಾಲಕನಿಗೆ ಆರೋಪಿಗಳು ಯಾರಿಗೂ ವಿಷಯ ತಿಳಿಸದಂತೆ 20 ರೂಪಾಯಿ ನೀಡಿ ಕಳುಹಿಸಿದ್ದಾರೆ.

ಸಂತ್ರಸ್ತ ಬಾಲಕನ ತಂದೆ ಕೃಷಿಗೆ ಸಂಬಂಧಿಸಿದ ಉಪಕರಣ ತರಲು ಮಗನನ್ನು ಮಾರುಕಟ್ಟೆಗೆ ಕಳುಹಿಸಿದ್ದರು.  ಈ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಬಾಲಕನ್ನು ಅಡ್ಡಗಟ್ಟಿದ ಇಬ್ಬರು ಬಾಲಕರು ಲೋಧ ಪ್ರದೇಶದ ಅರಣ್ಯಕ್ಕೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ಕೃತ್ಯದ ಬಳಿಕ ಬಾಲಕನಿಗೆ 20 ರೂಪಾಯಿ ನೀಡಿ, ಈ ವಿಚಾರ ಯಾರಿಗೂ ಹೇಳದಂತೆ ಹೇಳಿ ಕಳುಹಿಸಿದ್ದಾರೆ.  ಆದರೆ ಸಂತ್ರಸ್ತ ಬಾಲಕ ಮನೆಗೆ ಬಂದು ನಡೆದ ವಿಷಯವನ್ನು ತಿಳಿಸಿದ್ದಾನೆ.


Provided by

ಈ ಪ್ರಕರಣ ಸಂಬಂಧ  ಸಂತ್ರಸ್ತ ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಬಾಲಕರ ಬಗ್ಗೆ ಅವರ ಮನೆಯವರಿಗೆ ದೂರು ನೀಡಿದರೂ ಅವರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ