13 ವರ್ಷದ ಬಾಲಕಿಯ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ - Mahanayaka
3:08 PM Thursday 12 - December 2024

13 ವರ್ಷದ ಬಾಲಕಿಯ ಮೇಲೆ 9 ಮಂದಿಯಿಂದ ಸಾಮೂಹಿಕ ಅತ್ಯಾಚಾರ

17/01/2021

ಭೋಪಾಲ್: 13 ವರ್ಷ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಉಮರಿಯಾನಲ್ಲಿ  ನಡೆದಿದ್ದು,  ಜನವರಿ 4ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿದ್ದ ವ್ಯಕ್ತಿಯೋರ್ವ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರದ ಬಳಿಕ ತನ್ನ 6 ಸ್ನೇಹಿತರಿಂದ ಬಾಲಕಿಯನ್ನು ಆತ ಅತ್ಯಾಚಾರ ನಡೆಸಿದ್ದು,  2 ದಿನಗಳವರೆಗೆ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಲಾಗಿದೆ.  ಅತ್ಯಾಚಾರದ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುತ್ತೇವೆ ಎಂದು ಬೆದರಿಸಿ ಬಾಲಕಿಯನ್ನು ಅತ್ಯಾಚಾರಿಗಳು ಕಳುಹಿಸಿದ್ದರು.

ಈ ಘಟನೆ ಕಳೆದು 6 ದಿನಗಳ ಬಳಿಕ ಬಾಲಕಿಯನ್ನು ಮತ್ತೆ ಅಪಹರಿಸಿ ಕಾಡಿನಲ್ಲಿ ಬಂಧಿಸಿ  ಇದೇ 7 ಜನರು ಅತ್ಯಾಚಾರ ಎಸಗಿದ್ದಾರೆ. ಈ ಘಟನೆಯ ಬಳಿಕ ಬಾಲಕಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮೂವರು ಟ್ರಕ್ ಚಾಲಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದು, ಅವರು ರಸ್ತೆ ಬದಿಯ ಉಪಹಾರ ಗೃಹಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಬಾಲಕಿ ಹೇಗೋ ತಪ್ಪಿಸಿಕೊಂಡು ತನ್ನ ಮನೆ ಸೇರಿದ್ದಾಳೆ.

ಘಟನೆ ಸಂಬಂಧ ವಿವಿಧ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಇಲ್ಲಿಯವರೆಗೆ 6 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ