ಚುನಾವಣೆ ಕೆಲಸದಲ್ಲಿ ಭಾಗಿಯಾಗಿದ್ದ 139 ಶಿಕ್ಷಕರು ಕೊರೊನಾಕ್ಕೆ ಬಲಿ | ಸಾವಿರಾರು ಶಿಕ್ಷಕರಿಗೆ ಕೊರೊನಾ ಸೋಂಕು - Mahanayaka
8:48 PM Friday 20 - September 2024

ಚುನಾವಣೆ ಕೆಲಸದಲ್ಲಿ ಭಾಗಿಯಾಗಿದ್ದ 139 ಶಿಕ್ಷಕರು ಕೊರೊನಾಕ್ಕೆ ಬಲಿ | ಸಾವಿರಾರು ಶಿಕ್ಷಕರಿಗೆ ಕೊರೊನಾ ಸೋಂಕು

election commission
28/04/2021

ಅಲಹಾಬಾದ್: ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಪಂಚಾಯತ್ ಚುನಾವಣೆ ಕೆಲಸಕ್ಕೆ ಹಾಜರಾಗಿದ್ದ ಸುಮಾರು 135 ಶಿಕ್ಷಕರು ಶಂಕಿತ ಕೊವಿಡ್ ರೋಗದಿಂದ ಸಾವಿಗೀಡಾಗಿದ್ದು, ಈ ಸಂಬಂಧ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿ ಕೊಂಡ ಅಲಹಾಬಾದ್ ಹೈಕೋರ್ಟ್ ಉತ್ತರಪ್ರದೇಶ ಸುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಕೊವಿಡ್ ನಿಯಮಗಳನ್ನು ಪಾಲಿಸದೇ ನಿರ್ಲಕ್ಷ್ಯದಿಂದ ಚುನಾವಣೆ ನಡೆಸಲಾಗಿತ್ತು. ಇದಾದ ಬೆನ್ನಲ್ಲೇ ನೂರಾರು  ಶಿಕ್ಷಕರು ಕೊವಿಡ್ ಲಕ್ಷಣದ ರೋಗದಿಂದ ಬಳಲಿದ್ದು, ಮೃತಪಟ್ಟಿದ್ದರು. ಇನ್ನೂ ಈ ಸಂಬಂಧ ಉತ್ತರ ಪ್ರದೇಶ ಚುನಾವಣಾ ಆಯೋಗಕ್ಕೆ ಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ನಿಮ್ಮ ಮೇಲೆ ಯಾಕೆ ಕ್ರಮಕೈಗೊಳ್ಳಬಾರದು ಎಂದು ಪ್ರಶ್ನಿಸಿ ನೋಟಿಸ್ ಜಾರಿ ಮಾಡಿದೆ.

ಉತ್ತರಪ್ರದೇಶದಲ್ಲಿ 10 ದಿನಗಳ ಚುನಾವಣೆ ಸೋಮವಾರ ಮುಕ್ತಾಯವಾಗಿತ್ತು. ಚುನಾವಣೆಯ ಬಳಿಕ ನೂರಾರು ಶಿಕ್ಷಕರಲ್ಲಿ ಕೊವಿಡ್ ಲಕ್ಷಣಗಳು ಕಂಡು ಬಂದಿದ್ದವು. ಆ ಬಳಿಕ 139 ಶಿಕ್ಷಕರು  ಇದೇ ರೋಗದಿಂದ ಸಾವನ್ನಪ್ಪಿದ್ದಾರೆ. ಚುನಾವಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಸಾವಿರಾರು ಶಿಕ್ಷಕರು ಇದೇ ರೋಗದಿಂದ ಬಳಲುತ್ತಿದ್ದಾರೆ. ಈ ನಡುವೆ ಇನ್ನೊಂದು ಸಂಕಷ್ಟ ಎದುರಾದ್ದು, ಮೇ 2ರಂದು ಪಂಚಾಯತ್ ಚುನಾವಣೆಗಳು ಫಲಿತಾಂಶ ದಿನಾಂಕವಾಗಿದ್ದು, ಮತ ಎಣಿಕೆ ಕಾರ್ಯದಲ್ಲಿ ಸಾವಿರಾರು ಶಿಕ್ಷಕರು ಭಾಗವಹಿಸಬೇಕಿದೆ. ಇದೇ ಸಂದರ್ಭದಲ್ಲಿ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.


Provided by

ಇತ್ತೀಚಿನ ಸುದ್ದಿ