ಓಡಿ ಹೋಗಿ ಮದುವೆಯಾದ 14-13 ವಯಸ್ಸಿನ ಇಬ್ಬರು ಸಲಿಂಗಿ ಬಾಲಕಿಯರು! | ಮಕ್ಕಳ ವರ್ತನೆಯಿಂದ ಪೋಷಕರು ಕಂಗಾಲು - Mahanayaka

ಓಡಿ ಹೋಗಿ ಮದುವೆಯಾದ 14-13 ವಯಸ್ಸಿನ ಇಬ್ಬರು ಸಲಿಂಗಿ ಬಾಲಕಿಯರು! | ಮಕ್ಕಳ ವರ್ತನೆಯಿಂದ ಪೋಷಕರು ಕಂಗಾಲು

08/02/2021

ಜಾರ್ಖಂಡ್: ಅವರಿಬ್ಬರು 14-13 ವರ್ಷ ವಯಸ್ಸಿನ ಹುಡುಗಿಯರು. ಸ್ನೇಹಿತರಾಗಿದ್ದ ಇವರ ನಡುವೆ ಪ್ರೀತಿ ಚಿಗುರಿದ್ದು, ಇಬ್ಬರು ಕೂಡ ಓಡಿ ಹೋಗಿ ಮದುವೆಯಾಗಿದ್ದಾರೆ. ಈ ಇಬ್ಬರು ಹುಡುಗಿಯರ ವರ್ತನೆಯಿಂದ ಪೋಷಕರು ಕಂಗಾಲಾಗಿದ್ದಾರೆ.

 

ಈ ಘಟನೆ ನಡೆದಿರುವುದು ಜಾರ್ಖಂಡ್ ನ ಧನಬಾದ್ ನಲ್ಲಿ. ಈ 14-13 ವರ್ಷದ ಬಾಲಕಿಯರು ಕುಟುಂಬಸ್ಥರಿಂದ ದೂರವಾಗಿ ಮದುವೆಯಾಗಿದ್ದಾರೆ. ಇವರ ವರ್ತನೆಯಿಂದ ಬೇಸತ್ತು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

 

ಬಾಲ್ಯದಿಂದಲೂ ಈ ಇಬ್ಬರು ಬಾಲಕಿಯರು ಒಬ್ಬರನ್ನೊಬ್ಬರು ಬಹಳ ಇಷ್ಟ ಪಡುತ್ತಿದ್ದರು. 14 ವರ್ಷದ ಬಾಲಕಿ ತಾನು ಹುಡುಗ ಎಂದು ಹೇಳುತ್ತಿದ್ದು, ತನ್ನ ತಲೆ ಕೂದಲುಗಳನ್ನು ಹುಡುಗರಂತೆಯೇ ಕತ್ತರಿಸಿಕೊಂಡಿದ್ದಾಳೆ. 13 ವರ್ಷದ ಬಾಲಕಿ ಹುಡುಗಿಯರಂತೆಯೇ ಬಟ್ಟೆ ಧರಿಸಿದ್ದಾಳೆ.

 

ಕೆಲವು ದಿನಗಳ ಹಿಂದೆ ಇದೇ ವೇಷದಲ್ಲಿ ಇಬ್ಬರು ಕೂಡ ದೇವಸ್ಥಾನಕ್ಕೆ ಹೋಗಿ ಮದುವೆಯಾಗಿದ್ದಾರೆ. ಆದರೆ ಈ ನಡುವೆ ಪಾಲಕರು ಎಂಟ್ರಿಯಾಗಿದ್ದರಿಂದಾಗಿ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಇಬ್ಬರು ಹುಡುಗಿಯರಿಗೆ ಕೂಡ 18 ವರ್ಷ ತುಂಬುವವರೆಗೆ ಪೋಷಕರ ಜೊತೆಗೆ ಇರಬೇಕು ಎಂದು ತಿಳಿಹೇಳಿ ಪೊಲೀಸರು ಪೋಷಕರ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ.

 

ಇತ್ತೀಚಿನ ಸುದ್ದಿ