140 ದಶಲಕ್ಷ ವರ್ಷಗಳ ಹಿಂದಿನ, ಪ್ರಪಂಚದ ಅತ್ಯಂತ ದೊಡ್ಡ ಡೈನೋಸರ್ ನ ಪಳೆಯುಳಿಕೆ ಪತ್ತೆ - Mahanayaka
7:13 AM Thursday 19 - September 2024

140 ದಶಲಕ್ಷ ವರ್ಷಗಳ ಹಿಂದಿನ, ಪ್ರಪಂಚದ ಅತ್ಯಂತ ದೊಡ್ಡ ಡೈನೋಸರ್ ನ ಪಳೆಯುಳಿಕೆ ಪತ್ತೆ

02/03/2021

ಬ್ಯೂನಸ್: ಸುಮಾರು 140 ದಶಲಕ್ಷ ವರ್ಷಗಳಷ್ಟು ಹಳೆಯದಾದ ಡೈನೋಸರ್ ನ ಪಳೆಯುಳಿಕೆ ಅರ್ಜೆಂಟೀನಾದಲ್ಲಿ ಪತ್ತೆಯಾಗಿದ್ದು, ಇದು ಇಲ್ಲಿಯವರೆಗೆ ದೊರಕಿದ ಡೈನೋಸರ್ ಗಳ ಪಳೆಯುಳಿಕೆಯಲ್ಲಿಯೇ ಅತೀ ದೊಡ್ಡ ಡೈನೋಸರ್ ಎಂದು ತಿಳಿದು ಬಂದಿದೆ.

ಪ್ಯಾಟಗೋನಿಯಾ ಕಾಡಿನ ಸಂಶೋಧಕರು ಈ ಅತೀ ದೊಡ್ಡ ಡೈನೋಸರ್ ನ್ನು ಪತ್ತೆ ಹಚ್ಚಿದ್ದಾರೆ. ಅರ್ಜೆಂಟೀನಾದ ನ್ಯೂಕ್ವಿನ್ ಪಟ್ಟಣದ ದಕ್ಷಿಣದಲ್ಲಿ ಸಂಶೋಧನೆ ನಡೆಸುತ್ತಿರುವ ಸಂಶೋಧಕರಿಗೆ ಈ ಡೈನೋಸರ್ ಅವಶೇಷಗಳು ದೊರಕಿವೆ.

ಭೂಮಿಯ ಅತೀ ದೊಡ್ಡ ಜೀವರಾಶಿಗಳಲ್ಲಿಯೇ ಅತೀ ದೊಡ್ಡ ಜೀವಿಗಳು ಎಂದು ಗುರುತಿಸಲ್ಪಡುವ  ನಿಂಜಾಟಿಯನ್ ಡೈನೋಸಾರ್‌ ನ ಪಳೆಯುಳಿಕೆ ಇದೀಗ ಪತ್ತೆಯಾಗಿರುವ ಪಳೆಯುಳಿಕೆಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.


Provided by

ಸುಮಾರು 140 ದಶಲಕ್ಷ ವರ್ಷಗಳಷ್ಟು ಹಿಂದೆ ಈ ಜೀವಿಗಳು ಭೂಮಿಯಲ್ಲಿ ವಾಸಿಸುತ್ತಿದ್ದವು. ಈ ಡೈನೋಸರ್ ಗಳು ಮರಗಳನ್ನು ತಿಂದು ಜೀವಿಸುತ್ತಿದ್ದವು. ಉದ್ದವಾದ ಕುತ್ತಿಗೆಯನ್ನು ಹೊಂದಿದ್ದ ಈ ಡೈನೋಸರ್ ಗಳು ಬೃಹತ್ ಮರಗಳನ್ನು ತಿಂದು ಜೀವಿಸುತ್ತಿದ್ದವು ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.

whatsapp

ಇತ್ತೀಚಿನ ಸುದ್ದಿ