15 ದಿನಗಳ ಕಾಲ ಲಾಕ್ ಡೌನ್ ಮಾಡಿ | ಸಂಪುಟ ಸಭೆಯಲ್ಲಿ ಸುಧಾಕರ್ ಒತ್ತಾಯ - Mahanayaka
12:01 PM Wednesday 12 - March 2025

 15 ದಿನಗಳ ಕಾಲ ಲಾಕ್ ಡೌನ್ ಮಾಡಿ | ಸಂಪುಟ ಸಭೆಯಲ್ಲಿ ಸುಧಾಕರ್ ಒತ್ತಾಯ

sudhakar
26/04/2021

ಬೆಂಗಳೂರು: ವಿಕೆಂಡ್ ಕರ್ಫ್ಯೂ ಬಳಿಕ ಇಂದು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಚಿವ ಸುಧಾಕರ್ ಅವರು 15 ದಿನಗಳ ಕಾಲ ಲಾಕ್ ಡೌನ್ ಘೋಷಿಸಬೇಕು ಎಂದು  ಸಚಿವ ಸಂಪುಟ ಸಭೆಯಲ್ಲಿ ಒತ್ತಾಯ ಮಾಡಿದ್ದಾರೆ.

15 ದಿನಗಳ ಕಾಲ ಲಾಕ್ ಡೌನ್ ಮಾಡುವ ಅಗತ್ಯ ಇದೆ. ತಜ್ಞರ ಸಲಹೆಯಂತೆ ಲಾಕ್ ಡೌನ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.  ರಾಜ್ಯದಲ್ಲಿ ಮೆಡಿಕಲ್ ವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಮತ್ತಷ್ಟು ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ಸುಧಾಕರ್ ಹೇಳಿದ್ದಾರೆ.

ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಕೇಸ್ 3 ಪಟ್ಟು ಹೆಚ್ಚಾಗುವ ಸಾಧ್ಯತೆಗಳಿವೆ. 15 ದಿನಗಳ ಕಾಲ ಲಾಕ್ ಡೌನ್ ಮಾಡಿ, ಈ ಸಮಯದಲ್ಲಿ ಮೆಡಿಕಲ್ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳಲು ಅವಕಾಶವಾಗುತ್ತದೆ. ತಜ್ಞರ ಸಲಹೆಯಂತೆ ಲಾಕ್ ಡೌನ್ ಮಾಡಿ ಎಂದು ಸಚಿವ ಸುಧಾಕರ್ ಒತ್ತಾಯಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ