ಆಸ್ಪತ್ರೆಯ ಶೈತ್ಯಾಗಾರದಲ್ಲಿ 15 ತಿಂಗಳಿನಿಂದ ಕೊಳೆಯುತ್ತಿದ್ದ 2 ಕೊವಿಡ್ ಮೃತದೇಹಗಳು! - Mahanayaka
8:26 AM Wednesday 13 - November 2024

ಆಸ್ಪತ್ರೆಯ ಶೈತ್ಯಾಗಾರದಲ್ಲಿ 15 ತಿಂಗಳಿನಿಂದ ಕೊಳೆಯುತ್ತಿದ್ದ 2 ಕೊವಿಡ್ ಮೃತದೇಹಗಳು!

esi
30/11/2021

ಬೆಂಗಳೂರು: ಕೊವಿಡ್ 19 ಕಾಲದಲ್ಲಿ ಭಾರತದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೀವ್ರ ಸದ್ದು ಮಾಡಿತ್ತು. ಈ ಬಗ್ಗೆ ಸರ್ಕಾರಗಳ ಮೌನ ಕೂಡ ಪ್ರಶ್ನೆಗೆ ಕಾರಣವಾಗಿತ್ತು. ಇದೀಗ ಬೆಂಗಳೂರಿನ ರಾಜಾಜಿನಗರದ ಇಎಸ್ ಐ ಆಸ್ಪತ್ರೆಯ ನಿರ್ಲಕ್ಷ್ಯ ಬಯಲಾಗಿದ್ದು, ಸಾರ್ವಜನಿಕರು ಬೆಚ್ಚಿಬೀಳುವಂತಾಗಿದೆ.

15 ತಿಂಗಳಿಂದ ಇಎಸ್ ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿಯೇ ವಿಲೇವಾರಿಯಾಗದೇ ಬಾಕಿಯಾಗಿದ್ದ ಎರಡು  ಕೊವಿಡ್ ಸೋಂಕಿನಿಂದ ಮೃತಪಟ್ಟವರ ಮೃತದೇಹಗಳು ಪತ್ತೆಯಾಗಿದ್ದು, ಆಸ್ಪತ್ರೆಯ ನಿರ್ಲಕ್ಷ್ಯತನದ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ದುರ್ಗಾ ಸುಮಿತ್ರಾ:

2020ರ ಜುಲೈನಲ್ಲಿ ಚಾಮರಾಜಪೇಟೆಯ 40 ವರ್ಷ ವಯಸ್ಸಿನ ದುರ್ಗಾ ಸುಮಿತ್ರಾ ಎಂಬವರಿಗೆ ಕೆಮ್ಮು ಬಾಧಿಸಿತ್ತು. ಇದರ ಜೊತೆಗೆ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಂಡಿದ್ದು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಹಾಸಿಗೆ ಸಮಸ್ಯೆಯ ಹಿನ್ನೆಲೆಯಲ್ಲಿ ವರದಿಗಾರರೊಬ್ಬರ ನೆರವಿನಿಂದ  ಇಎಸ್ ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಬಳಿಕ ಅವರು ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಬಂತು ಆದರೆ, 15 ತಿಂಗಳಾದರೂ ಅವರ ಮೃತದೇಹ ವಿಲೆ ಮಾಡಿರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಜೊತೆಗೆ ಆಸ್ಪತ್ರೆಗೆ ಸೇರಿಸುವ ಬದಲು ಅವರನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರೆ ಒಳ್ಳೆಯದಿತ್ತೇನೋ ಎಂದು ಪಶ್ಚಾತಾಪಪಟ್ಟಿದ್ದಾರೆ.




ಎನ್.ಎಲ್.ಮುನಿರಾಜು:

ಜುಲೈ 2ರಂದು ಕೆ.ಪಿ.ಅಗ್ರಹಾರದ 67 ವರ್ಷ ವಯಸ್ಸಿನ ಎನ್.ಎಲ್.ಮುನಿರಾಜು  ಅವರನ್ನು ಇಎಸ್ ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಎಸ್ ಐ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿರಲಿಲ್ಲ. ಅವರ ಆರೋಗ್ಯದ ಸ್ಥಿತಿಯ ಬಗ್ಗೆ  ಕೂಡ ಮಾಹಿತಿ ನೀಡಿರಲಿಲ್ಲ. 10 ದಿನಗಳ ಬಳಿಕ ಅವರಿಗೆ ಕೊವಿಡ್ ಇತ್ತು ಎಂದು ತಿಳಿಸಿದರು. ಮೃತದೇಹ ಕೇಳಲು ಹೋದಾಗ ಅವರನ್ನು ಅದಾಗಲೇ ಬಿಬಿಎಂಪಿಯವರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದರು. ನಮ್ಮ ಸಹಿ ಇಲ್ಲದೇ ಹೇಗೆ ಕೊಟ್ಟಿದ್ದೀರಿ ಎಂದಿದ್ದಕ್ಕೆ, ಪರವಾಗಿಲ್ಲ, ಈಗ ಸಹಿ ಹಾಕಿ ಎಂದಿದ್ದರು. ಇದು ಅಲ್ಲಿನ ಬೇಜಾವಾಬ್ದಾರಿ ಎಂದು ಮೃತರ ಕುಟುಂಬಸ್ಥರು ಹೇಳಿದ್ದಾರೆ.

ಘಟನೆ ಬೆಳಕಿಗೆ ಬಂದದ್ದು ಹೇಗೆ?

ವರದಿಗಳ ಪ್ರಕಾರ, ಆಸ್ಪತ್ರೆಯ ಆವರಣದಲ್ಲಿರುವ ಹಳೆಯ ಶೈತ್ಯಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿತ್ತು. ಅವುಗಳನ್ನು ವಿಲೆ ಮಾಡಲು ಸಿಬ್ಬಂದಿ ಮರೆತಿದ್ದರು. ಕೊವಿಡ್ ಸಾವು ಪ್ರಮಾಣ ಕಡಿಮೆಯಾಗಿದ್ದರಿಂದಾಗಿದ್ದರಿಂದ ಶೈತ್ಯಾಗಾರದತ್ತ ಸಿಬ್ಬಂದಿ ತಿರುಗಿ ನೋಡಲಿಲ್ಲ ಎನ್ನಲಾಗಿದೆ. 2021ರ ಆಗಸ್ಟ್ ನಲ್ಲಿ ಶೈತ್ಯಾಗಾರಕ್ಕೆ ಬೀಗ ಹಾಕಲಾಗಿತ್ತು. ಆ ಸಂದರ್ಭದಲ್ಲಿಯೂ ಶೈತ್ಯಾಗಾರದಲ್ಲಿ ಯಾರೂ ಪರಿಶೀಲನೆ ನಡೆಸಿರಲಿಲ್ಲ. ಕಳೆದ ಶನಿವಾರ ಸ್ವಚ್ಛತಾ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಮೃತದೇಹಗಳು ಕೊಳತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಆಸ್ಪತ್ರೆಗಳ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು, ಕೊವಿಡ್ ಕಾಲದಲ್ಲಿ ಎಷ್ಟು ಬೊಬ್ಬೆ ಹಾಕಿದರೂ ಸರ್ಕಾರ ಕ್ಯಾರೇ ಅಂದಿರಲಿಲ್ಲ. ಎಲ್ಲದಕ್ಕೂ ಕೊವಿಡ್ ಕಾರಣಗಳನ್ನು ಹೇಳಿ ಸಾರ್ವಜನಿಕರನ್ನು ಮನೆಯೊಳಗೆ ಕೂರಿಸಲಾಗಿತ್ತು. ಕೊವಿಡ್ ಪಾಸಿಟಿವ್ ಬಂದ ಬಳಿಕ ಅವರ ಮನೆಯವರು ಹೊರಗಡೆ ಸುತ್ತಾಡುವಂತಿಲ್ಲ. ಆಸ್ಪತ್ರೆಗೆ ದಾಖಲಾದವರು ಹೇಗಿದ್ದಾರೆ ಎನ್ನುವ ಮಾಹಿತಿ ಕೂಡ ಇಲ್ಲ. ಸರಿಯಾದ ಆಹಾರ, ಬಿಸಿ ನೀರು ಕೂಡ ಸಿಗುತ್ತಿಲ್ಲ ಎನ್ನುವ ಆರೋಪಗಳನ್ನು ರೋಗಿಗಳು ಮಾಡಿದ್ದರು. ಕೆಲವರು ಆಸ್ಪತ್ರೆಯೊಳಗಿಂದ ಲೈವ್ ಮಾಡಿದರೂ, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನ ರಕ್ಷಣೆಗೆ ಮುಂದಾಗಿದ್ದ ಯುವಕನನ್ನು ಥಳಿಸಿಕೊಂದ ಗುಂಪು!

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಮೇಲೆ ರಾತ್ರಿಯಿಡೀ ಸಂಚರಿಸಿದ ವಾಹನಗಳು!

ಆಟೋಗೆ ಡಿಕ್ಕಿ ಹೊಡೆದ ಲಾರಿ: ಬಾಲಕನ ದಾರುಣ ಸಾವು, ಮೂವರ ಸ್ಥಿತಿ ಗಂಭೀರ

ಲಾಕಪ್ ಡೆತ್: ಪೊಲೀಸರ ವಶದಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು!

ಒಮಿಕ್ರಾನ್: ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ | ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇದೆಯಾ? | ಸಚಿವ ಸುಧಾಕರ್ ನೀಡಿದ ಖಡಕ್ ಎಚ್ಚರಿಕೆ ಏನು?

ಇತ್ತೀಚಿನ ಸುದ್ದಿ